ಎಲ್ಲಾ ಹಾಸ್ಟೆಲ್'ಗಳಲ್ಲಿ  ದೇಶ ಭಕ್ತಿಯನ್ನು ಪಸರಿಸಲು ಮುಖ್ಯಮಂತ್ರಿ ವಸುಂದರಾ ರಾಜೇ ಸರ್ಕಾರ ವಿನೂತನ ರೀತಿಯ ಕ್ರಮ ಕೈಗೊಳ್ಳುತ್ತಿದೆ.  ಎಲ್ಲಾ ಹಾಸ್ಟೆಲ್'ಗಳಲ್ಲಿಯೂ ಕೂಡ  ಇನ್ನುಮುಂದೆ ರಾಷ್ಟ್ರಗೀತೆ ಹಾಡೋದನ್ನು ಕಡ್ಡಾಯ ಮಾಡಲಾಗಿದೆ.

ಜೈಪುರ(ನ.28): ರಾಜಸ್ಥಾನ ಹಾಸ್ಟೆಲ್'ಗಳಲ್ಲಿ ಹೊಸ ರೀತಿಯ ಕಾನೂನು ಜಾರಿ ತರಲಾಗಿದೆ. ಇಲ್ಲಿನ ಎಲ್ಲಾ ಹಾಸ್ಟೆಲ್'ಗಳಲ್ಲಿ ದೇಶ ಭಕ್ತಿಯನ್ನು ಪಸರಿಸಲು ಮುಖ್ಯಮಂತ್ರಿ ವಸುಂದರಾ ರಾಜೇ ಸರ್ಕಾರ ವಿನೂತನ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಎಲ್ಲಾ ಹಾಸ್ಟೆಲ್'ಗಳಲ್ಲಿಯೂ ಕೂಡ ಇನ್ನುಮುಂದೆ ರಾಷ್ಟ್ರಗೀತೆ ಹಾಡೋದನ್ನು ಕಡ್ಡಾಯ ಮಾಡಲಾಗಿದೆ.

ಈ ಬಗ್ಗೆ ಇಲ್ಲಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಆದೇಶವನ್ನು ಹೊರಡಿಸಿದೆ. ಒಟ್ಟು ರಾಜಸ್ಥಾನದ 800 ಹಾಸ್ಟೆಲ್'ಗಳಲ್ಲಿ ಈ ಕಾನೂನಿಂದ ಇನ್ನು ಮುಂದೆ ರಾಷ್ಟ್ರಗೀತೆ ಮೊಳಗಲಿದೆ.