* 18 ಸಾವಿರ ಅಭ್ಯರ್ಥಿಗಳ ಮಧ್ಯೆ ಶಾಸಕನ ಮಗನೂ ಆಯ್ಕೆ* 10ನೇ ತರಗತಿ ಪಾಸಾದವನಿಗೆ ಕೆಲಸ ಸಿಗಲು ಶಾಸಕರ ಪ್ರಭಾವ
ಜೈಪುರ: ಕೆಲಸ ಅದರಲ್ಲಿಯೂ, ಸರಕಾರಿ ಕೆಲಸ ದಕ್ಕಿಸಿಕೊಳ್ಳುವುದು ಸುಲಭದ ಮಾತಲ್ಲ. ಕ್ಲರ್ಕ್ ಪೋಸ್ಟ್ ಎಂದರೂ ಎಂಬಿಎ, ಪಿ.ಎಚ್‌ಡಿ ಪದವೀಧರರೂ ಅರ್ಜಿ ಸಲ್ಲಿಸುತ್ತಾರೆ. ಆದರೆ, ರಾಜಕಾರಣಿಗಳ ಮಕ್ಕಳು, ಸರಕಾರಿ ಕ್ಲರ್ಕ್ ಆಗಿ ನೇಮಕಗೊಳ್ಳುವುದೆಂದರೆ?
ರಾಜಕಾರಣಿಯೊಬ್ಬ ತನ್ನ ಮಗನೂ ದೊಡ್ಡ ನಾಯಕನಾಗಲಿ ಎಂದು ನಿರೀಕ್ಷಿಸುವುದು ಸಾಮಾನ್ಯ. ಆದರೆ, ಈ ಘಟನೆಯಲ್ಲಿ 10ನೇ ತರಗತಿ ಉತ್ತೀರ್ಣನಾದ ಶಾಸಕನ ಮಗ ರಾಜ್ಯ ವಿಧಾನಸಭೆಯಲ್ಲಿ 4ನೇ ದರ್ಜೆಯ ಅಧಿಕಾರಿಯಾಗಿ ಸರಕಾರಿ ಉದ್ಯೋಗ ಪಡೆದಿದ್ದಾನೆ. ಆದರೆ, ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಶಾಸಕರ ಪ್ರಭಾವದಿಂದಲೇ ಮಗನಿಗೆ ಕೆಲಸ ನೀಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಸುಮಾರು18 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದ ನಾಲ್ಕನೇ ದರ್ಜೆ ಅಧಿಕಾರಿ ಹುದ್ದೆಗೆ ಆಯ್ಕೆಯಾದ 18 ಮಂದಿಯಲ್ಲಿ ಬಿಜೆಪಿ ಶಾಸಕ ಜಗದೀಶ್ ನಾರಾಯಣ್ ಮೀನಾ ಅವರ ಪುತ್ರ ರಾಮಕೃಷ್ಣ 12ನೇಯವರಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ಆರಂಭಿಕ ವೇತನ 12,400 ರೂ.
