Asianet Suvarna News Asianet Suvarna News

ವಸುಂಧರಾ ರಾಜೇ ಪೋಸ್ಟರ್ ಮುಂದೆಯೇ ಸೂಸು ಮಾಡಿದ ಬಿಜೆಪಿ ಸಚಿವ

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನ  ನಡೆಸಲು ಸಾಕಷ್ಟು ರೀತಿಯಲ್ಲಿ ಕಾರ್ಯ ಕೈಗೊಳ್ಳುತ್ತಿದ್ದರೆ ರಾಜಸ್ಥಾನ ಬಿಜೆಪಿ ಸಚಿವರೋರ್ವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. 

Rajasthan Minister Caught Urination In Public
Author
Bengaluru, First Published Oct 8, 2018, 1:20 PM IST
  • Facebook
  • Twitter
  • Whatsapp

ಅಜ್ಮೀರ್ :  ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಯಶಸ್ಸ್ಿಗಾಗಿ ಸಾಕಷ್ಟು ರೀತಿಯ ಕ್ರಮ ಕೈಗೊಳ್ಳುತ್ತಿದ್ದರೆ ಇತ್ತ ಬಿಜೆಪಿ ಸಚಿವರೋರ್ವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿ ವಿವಾದಕ್ಕೀಡಾಗಿದ್ದಾರೆ. 

ರಾಜಸ್ಥಾನದ ಸಚಿವರೋರ್ವರು ಗೋಡೆಯ ಬಳಿಯಲ್ಲಿ ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡಿರುವ ಫೊಟೊ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 

ಅಜ್ಮೀರ್ ನಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ರ್ಯಾಲಿಯ ಪೋಸ್ಟರ್ ಹಾಕಲಾಗಿದ್ದು, ಆ ಪೋಸ್ಟರ್ ಪಕ್ಕದಲ್ಲಿಯೇ ಕುಳಿತುಕೊಂಡು ಸಾರ್ವಜನಿಕ ಸ್ಥಳದಲ್ಲಿ ಪೂತ್ರ ವಿಸರ್ಜನೆ ಮಾಡಿದ್ದಾರೆ. 

ಸಚಿವ ಶಂಭು ಸಿಂಗ್ ಕಟೇಸರ್ ಅವರು ಈ ರೀತಿಯಾಗಿ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ ಇದೀಗ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 

ಇದೊಂದು ಅತ್ಯಂತ ಪ್ರಾಚೀನ ಸಂಪ್ರದಾಯವಾಗಿದ್ದು, ತಾವು ಯಾವುದೇ ತಪ್ಪನ್ನು ಎಸಗಿಲ್ಲ ಎಂದು ಹೇಳಿದ್ದಾರೆ. 

ಅಲ್ಲದೇ ಪೋಸ್ಟರ್ ಬಳಿ ಮೂತ್ರ ವಿಸರ್ಜಿಸಿದ್ದಾರೆ ಎಂದು ಆರೋಪ ಮಾಡಿರುವುದರ ಸಂಬಂಧವೂ ಕೂಡ ಪ್ರತಿಕ್ರಿಯಿಸಿದ  ಅವರು  ಪೋಸ್ಟರ್ ತಾವು ಮೂತ್ರ ವಿಸರ್ಜನೆ ಮಾಡುವ ಜಾಗದಿಂದ ಅತ್ಯಂತ ದೂರದಲ್ಲಿಯೇ ಇತ್ತು ಎಂದು ಹೇಳಿದ್ದಾರೆ. 

ಬಿಜೆಪಿ ಸಚಿವರ ಈ ವರ್ತನೆಯಿಂದ ತೀವ್ರ ಮುಜುಗರ ಎದುರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರೆ ಇತ್ತ ಇವರು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿರುವುದು  ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

Follow Us:
Download App:
  • android
  • ios