ಗುಜರಾತಿನ ರಾಜಕೋಟ್‌ನಿಂದ ದೆಹಲಿ ಆಗ್ರಾಕ್ಕೆ ತೆರಳುತ್ತಿದ್ದ ಪ್ರವಾಸಿಗರನ್ನು ಜೂ.22ರಂದು ತಡೆದಿದ್ದ 10 ಮಂದಿ ಲೂಟಿಕೋರರ ತಂಡ ಗನ್ 470 ಕೆಜಿ ಬೆಳ್ಳಿ ಮತ್ತು 1.5 ಕೆಜಿ ತೂಕದ ಚಿನ್ನದ ಆಭರಣಗಳನ್ನು ದರೋಡೆ ಮಾಡಿತ್ತು.
ಜೈಪುರ(ಜು.05): ಮಕ್ಕಳು ತಮಾಷೆಗಾಗಿ ಆಟಿಕೆ ಗನ್ ತೋರಿಸಿ ಬೆದರಿಸುವ ಆಟ ಆಡುವುದು ಗೊತ್ತು. ಆದರೆ ರಾಜಸ್ಥಾನದಲ್ಲಿ ಕಳ್ಳರ ಗುಂಪೊಂದು ಹೀಗೆ ಆಟಿಕೆ ಗನ್ ತೋರಿಸಿ 3 ಕೋಟಿ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ.
ಗುಜರಾತಿನ ರಾಜಕೋಟ್ನಿಂದ ದೆಹಲಿ ಆಗ್ರಾಕ್ಕೆ ತೆರಳುತ್ತಿದ್ದ ಪ್ರವಾಸಿಗರನ್ನು ಜೂ.22ರಂದು ತಡೆದಿದ್ದ 10 ಮಂದಿ ಲೂಟಿಕೋರರ ತಂಡ ಗನ್ 470 ಕೆಜಿ ಬೆಳ್ಳಿ ಮತ್ತು 1.5 ಕೆಜಿ ತೂಕದ ಚಿನ್ನದ ಆಭರಣಗಳನ್ನು ದರೋಡೆ ಮಾಡಿತ್ತು. ಬಳಿಕ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹೆದ್ದಾರಿಗಳಲ್ಲಿ ತಾವು ದರೋಡೆ ಮಾಡಲು ಬಳಸಿದ್ದು ಆಟಿಕೆ ಗನ್ ಎಂದು ವಂಚಕರು ಒಪ್ಪಿಕೊಂಡಿದ್ದಾರೆ.
