.

ಜೈಪುರ(ಡಿ.20): ರಾಜಸ್ಥಾನದ ಬಿಜೆಪಿ ಸಚಿವರೊಬ್ಬರು ಪ್ರಧಾನಿ ಮೋದಿಯನ್ನು ಹೊಗಳುವ ಬರದಲ್ಲಿ ವಿಶ್ವದ ಅತ್ಯಂತ ಭ್ರಷ್ಟಾಚಾರದ ಪ್ರಧಾನಿ ಎಂದು ತೆಗಳಿರುವ ಘಟನೆ ಸಾರ್ವಜನಿಕ ಸಮಾರಂಭದಲ್ಲಿ ನಡೆದಿದೆ.

ರಾಜಸ್ಥಾನದ ವಸುಂಧರಾ ರಾಜೆ ಸಿಂಧಿಯಾ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾಗಿರುವ ಜಸ್ವಂತ್ ಸಿಂಗ್ ಯಾದವ್ ಈ ಹೇಳಿಕೆ ನೀಡಿ ಪೇಚೆಗೀಡಾಗಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಇಂದು ನಮಗೆ ಅತ್ಯುತ್ತಮವಾದ ದಿನ. ನಮ್ಮ ಗೌರವಾನ್ವಿತ ಪ್ರಖ್ಯಾತ ಪ್ರಧಾನಿಮಂತ್ರಿಗಳು ವಿಶ್ವದ ಅತ್ಯಂತ ಭ್ರಷ್ಟ ಪ್ರಧಾನಮಂತ್ರಿಗಳು. ಅವರ ನಾಯಕತ್ವದಲ್ಲಿ ಅವರ ನಾಯಕತ್ವದಲ್ಲಿ ಎರಡೂ ರಾಜ್ಯಗಳಲ್ಲೂ ದೊಡ್ಡ ಬಹುಮತವನ್ನೇ ಸಾಧಿಸಿದ್ದೇವೆ' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರು ಈ ರೀತಿ ಹೇಳುವಾಗ ತಪ್ಪನ್ನು ಸರಿಪಡಿಸಲು ಅಕ್ಕಪಕ್ಕದಲ್ಲಿ ಯಾರು ಇರಲಿಲ್ಲ. ಅಲ್ಲದೆ ಕೊನೆಯಲ್ಲಿ ಏನು ಹೇಳಿದರೆಂದು ಗಮನಿಸಲಿಲ್ಲ. ಸಚಿವರ ಈ ರೀತಿ ನೀಡಿದ ಹೇಳಿಕೆ ರಾಜಸ್ಥಾನದೆಲ್ಲಡೆ ವೈರಲ್ ಆಗಿದ್ದು ಬಿಜೆಪಿ ಹಾಗೂ ಮೋದಿ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.