ನಿನ್ನೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ನನಗೆ ಅವಕಾಶ ನೀಡಲಿಲ್ಲ. ನಿನ್ನೆ ಪರಮೇಶ್ವರ್ ಮನೆಯ ಬಳಿ ಹೋದಾಗ, ನಿನ್ನಂಥವರನ್ನು ನಾವು ತುಂಬಾ ಜನರನ್ನು ನೋಡಿದ್ದೇವೆ ಅಂತ ಅಂದಿದ್ದರು. ನಾನು ಹೋರಾಟವನ್ನು ಮುಂದುವರಿಸುತ್ತೇನೆ, ಯಾವುದೇ ಬೆದರಿಕೆಗೂ ಹೆದರೋಲ್ಲ ಎಂದು ಹೇಳಿದ್ದಾರೆ.
ನವದೆಹಲಿ(ಡಿ.14): ಸಚಿವ ಎಚ್.ವೈ. ಮೇಟಿ ರಾಸಲೀಲೆ ವಿಡಿಯೋವನ್ನ ಬಹಿರಂಗಪಡಿಸಿರುವ ಆರ್`ಟಿಐ ಕಾರ್ಯಕರ್ತ ರಾಜಶೇಖರ್, ಇನ್ನೂ ಇಬ್ಬರು ಸಚಿವರು 3 ಶಾಸಕರ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ರಾಜಶೇಖರ್, ಮುಖ್ಯಮಂತ್ರಿಗಳು ಮೇಟಿಯನ್ನು ಪಕ್ಷದಿಂದ ವಜಾಗೊಳಿಸಬೇಕು ಮತ್ತು ಹೈಕಮಾಂಡ್ ಭೇಟಿಗೆ ಈಗಲಾದ್ರೂ ಅವಕಾಶ ಮಾಡಿಕೊಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಯಾವುದೇ ಗೌರವವಿಲ್ಲ ಎಂದಿದ್ದಾರೆ.