ಗೋ ಕಳ್ಳರ ಬಂಧನ ಆಗ್ರಹಿಸಿ ಅಮರಣಾಂತ ಉಪವಾಸ; ರಾಜಾರಾಂ ಭಟ್ ಅಸ್ವಸ್ಥ

First Published 8, Apr 2018, 10:38 AM IST
Rajaram Bhat fell in ill
Highlights

ಗೋ ಕಳ್ಳರ ಬಂಧನ ಆಗ್ರಹಿಸಿ  ಅಮರಣಾಂತ ಉಪವಾಸ ಕೈಗೊಂಡ  ರಾಜಾರಾಂ ಭಟ್ ಅಸ್ವಸ್ಥರಾಗಿದ್ದಾರೆ. 

ಬೆಂಗಳೂರು (ಏ. 08): ಗೋ ಕಳ್ಳರ ಬಂಧನ ಆಗ್ರಹಿಸಿ  ಅಮರಣಾಂತ ಉಪವಾಸ ಕೈಗೊಂಡ  ರಾಜಾರಾಂ ಭಟ್ ಅಸ್ವಸ್ಥರಾಗಿದ್ದಾರೆ. 

ದ‌.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳದಲ್ಲಿ  ಕಳೆದ  ಏಳು ದಿನಗಳಿಂದ ರಾಜಾರಾಂ ಭಟ್  ಆಮರಣಾಂತ ಉಪವಾಸ ಕೈಗೊಂಡಿದ್ದಾರೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಪೊಲೀಸ್,  ಜಿಲ್ಲಾಡಳಿತ ಮನವೊಲಿಸಲು ಯತ್ನಿಸಿದರೂ ರಾಜಾರಾಂ ಭಟ್ ಉಪವಾಸ ಕೈ ಬಿಡಲು ಒಪ್ಪಿರಲಿಲ್ಲ.  ನಿನ್ನೆ ಆರ್’ಎಸ್’ಎಸ್  ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮನವೊಲಿಕೆ ಪ್ರಯತ್ನವೂ ವಿಫಲವಾಗಿದೆ.  ಇಂದು ರಾಜಾರಾಂ ಭಟ್ ದೇಹಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ  ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

 ರಾಜಾರಾಂ ಭಟ್ ಅಧ್ಯಕ್ಷತೆಯ ಅಮೃತಧಾರ ಗೋಶಾಲೆಯಿಂದ  ಗೋ ಕಳವು ಮಾಡಿರುವ  ನೈಜ ಆರೋಪಿಗಳ ಬಂಧನ ಆಗುವವರೆಗೆ  ಆಮರಣಾಂತ ಉಪವಾಸ ಪ್ರತಿಭಟನೆ ಕೈಗೊಂಡಿದ್ದರು. 

loader