ಗುಜರಾತ್: ಪದ್ಮಾವತ್ ವೀಕ್ಷಿಸುತ್ತೇನೆಂದ ಯುವಕನಿಗೆ ಥಳಿತ; ಇಬ್ಬರ ಬಂಧನ

Rajaput Man Beaten For Planning To Watch Padmavat
Highlights

  • ಫೋನ್’ನಲ್ಲಿ ಮಾತನಾಡುತ್ತಾ ಪದ್ಮಾವತ್ ವೀಕ್ಷಿಸುತ್ತೇನೆಂದ ಯುವಕನಿಗೆ ಥಳಿತ!
  • ಸಂಜಯ್ ಲೀಲಾ  ಬನ್ಸಾಲಿ ನಿರ್ದೇಶಿಸಿರುವ ಪದ್ಮಾವತಿ ಚಿತ್ರ

ವಡೋದರಾ: ಪದ್ಮಾವತ್  ಚಿತ್ರ ವೀಕ್ಷಿಸುತ್ತೇನೆಂದ ರಜಪೂತ ಯುವಕನಿಗೆ ಥಳಿಸಿದ ಆರೋಪದಲ್ಲಿ ಗುಜರಾತ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ರಜಪೂತ ಸಮುದಾಯಕ್ಕೆ ಸೇರಿದ ಉಪೇಂದ್ರ ಸಿಂಗ್ ಜಾಧವ್ ಪದ್ಮಾವತ್ ಚಿತ್ರ ವೀಕ್ಷಿಸಲು ಯೋಜನೆ ಹಾಕಿಕೊಂಡಿದ್ದು, ಸಮುದಾಯದ ಇತರರಿಗೆ ರೊಚ್ಚಿಗೆಬ್ಬಿಸಿದೆ.

ಕಳೆದ ಜ. 24ರಂದು ಹೋಟೆಲ್ ಒಂದರಲ್ಲಿ ಕುಳಿತು, ಗೆಳಯನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ, ಗುಜರಾತ್’ನಲ್ಲಿ ಪದ್ಮಾವತ್ ಬಿಡುಗಡೆಯಾಗುವ ಸಾಧ್ಯತೆಯಿಲ್ಲ, ಆದ್ದರಿಂದ ಚಿತ್ರ ವೀಕ್ಷಿಸಲು ತಾನು ಮುಂಬೈಗೆ ಹೋಗುವುದಾಗಿ ಹೇಳಿದ್ದಾನೆ.

ಅದನ್ನು ಕೇಳಿಸಿಕೊಂಡ ಆರೋಪಿಗಳು ಆತನನ್ನು ಥಳಿಸಿ,  ಕ್ಷಮೆಯಾಚಿಸುವಂತೆ ಒತ್ತಾಯಪಡಿಸಿದ್ದಾರೆ. ಈ ಎಲ್ಲಾವನ್ನು ಆರೋಪಿಗಳು ಮೊಬೈಲ್’ನಲ್ಲಿ ಚಿತ್ರೀಕರಿಸಿದ್ದಾರೆ. ಅದು ಬಳಿಕದ ದಿನಗಳಲ್ಲಿ ವೈರಲ್ ಕೂಡಾ ಆಗಿದೆ.

ಘಟನೆಯ ಬಳಿಕ ಉಪೇಂದ್ರ ಸಿಂಗ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಜಯ್ ಲೀಲಾ  ಬನ್ಸಾಲಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ, ಹಾಗೂ ಪದ್ಮಾವತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆಯೆಂದು ಆರೋಪಿಸಿ ರಜಪೂತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

loader