ಕಳೆದೆರಡು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿಯೂ ಕೆಲವಡೆ ಮಳೆ ಸುರಿದಿದೆ.
ಬೆಂಗಳೂರು : ಕಳೆದೆರಡು ದಿನಗಳಿಂದ ನಗರದ ಕೆಲವಡೆ ತುಂತುರು ಮಳೆಯಾಗುತ್ತಿದ್ದು, ಶುಕ್ರವಾರ ರಾತ್ರಿಯೂ ಕೆಲವಡೆ ಮಳೆ ಆಗಿದೆ.
ಶುಕ್ರವಾರ ಸಂಜೆ 9.30 ರಿಂದ ಆರಂಭವಾದ ಮಳೆ ರಾತ್ರಿ 11ರ ವರೆಗೆ ಸುರಿಯಿತು. ಶಿವಾನಂದ ವೃತ್ತ, ಮೆಜೆಸ್ಟಿಕ್, ಚಾಲುಕ್ಯ ವೃತ್ತ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ಮಲ್ಲೇಶ್ವರ, ರಾಜಾಜಿನಗರ, ಆನಂದ್ ರಾವ್ ವೃತ್ತ ಸೇರಿದಂತೆ ಹಲವಡೆ ಮಳೆಯಾದ ವರದಿಯಾಗಿದೆ.
ಗುರುವಾರ ತಡ ರಾತ್ರಿಯೂ ಮಹಾಲಕ್ಷ್ಮೀ ಲೇಔಟ್, ನಂದಿನಿ ಲೇಔಟ್, ವಿಧಾನಸೌಧ, ಶಿವಾಜಿನಗರ, ಕೆ.ಆರ್.ಸರ್ಕಲ್ ಸೇರಿದಂತೆ ಕೆಲವೆಡೆ ಮಳೆಯಾದ ವರದಿಯಾಗಿದೆ.
