ಬಿಸಿಲಿಂದ ಬೆಂದಿದ್ದ ಧರೆಗೆ ಮಳೆರಾಯ ತಂಪೆರೆದಿದ್ದಾನೆ. ಕಾಡ್ಗಿಚ್ಚಿನಿಂದ ಬೇಯುತ್ತಿದ್ದ ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮಳೆರಾಯನ ದರ್ಶನವಾಗಿದೆ. ಮಳೆಯಿಂದಾಗಿ ಬೆಂಕಿ ಹೊತ್ತಿದ್ದ ಕಾಡು ಈಗ ತಂಪಾಗಿದೆ.

ಮೈಸೂರು(ಮಾ.16): ಮೈಸೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಅರ್ಧ ಗಂಟೆಯಿಂದ ಜಿಟಿ ಜಿಟಿ ಮಳೆ ಬೀಳುತ್ತಿದೆ.

ಬಿಸಿಲಿಂದ ಬೆಂದಿದ್ದ ಧರೆಗೆ ಮಳೆರಾಯ ತಂಪೆರೆದಿದ್ದಾನೆ. ಕಾಡ್ಗಿಚ್ಚಿನಿಂದ ಬೇಯುತ್ತಿದ್ದ ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮಳೆರಾಯನ ದರ್ಶನವಾಗಿದೆ. ಮಳೆಯಿಂದಾಗಿ ಬೆಂಕಿ ಹೊತ್ತಿದ್ದ ಕಾಡು ಈಗ ತಂಪಾಗಿದೆ.

ಬಿಸಿಲ ಧಗೆಗೆ ಸುಸ್ತಾಗಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.