- ಎ.ಸಿ. ರೈಲು ಪ್ರಯಾಣಿಕರಿಗೆ ಬಿಸಾಡಬಹುದಾದ ಟವೆಲ್‌- ಟವೆಲ್ ತೆಗೆದುಕೊಂಡು ಹೋಗುವ ಗೋಜಿಲ್ಲ - ನಿಮ್ಮ ಪ್ರಯಾಣ ಇನ್ನಷ್ಟು ಹಗುರವಾಗಲಿದೆ

ನವದೆಹಲಿ (ಜು. 03): ರೈಲಿನ ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ಮುಖ ಒರೆಸುವ ಟವೆಲ್‌ಗಳ ಬದಲಾಗಿ ಅಗ್ಗದ, ಸಣ್ಣಗಾತ್ರದ, ಬಿಸಾಡಬಹುದಾದ ಮತ್ತು ಜೊತೆಗೆ ಒಯ್ಯಬಹುದಾದ ಟವೆಲ್‌ಗಳನ್ನು ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಸದ್ಯ ಪ್ರಯಾಣಿಕರಿಗೆ ನೀಡುತ್ತಿರುವ ಟವೆಲ್‌ನ ಬೆಲೆ ಸುಮಾರು 4 ರು. ಇದೆ. ಇವು 52 ಸೆಂಟಿಮೀಟರ್‌ ಉದ್ದ ಹಾಗೂ 40 ಸೆಂಟಿಮೀಟರ್‌ ಅಗಲವಾಗಿವೆ. ಅದರ ಬದಲು 40 ಸೆಂ.ಮೀ. ಉದ್ದ ಹಾಗೂ 30 ಸೆಂ.ಮೀ. ಅಗಲದ ಟವೆಲ್‌ಗಳನ್ನು ನೀಡಲಾಗುತ್ತದೆ. ಇದರ ವೆಚ್ಚವನ್ನು ಟಿಕೆಟ್‌ನಲ್ಲೇ ಸೇರಿಸಲಾಗುತ್ತದೆ. ಹೊಸ ಟವೆಲ್‌ಗಳು ಪರಿಸರ ಸ್ನೇಹಿಯಾಗಿದ್ದು, ಹತ್ತಿಯಿಂದ ಮಾಡಿರುವುದರಿಂದ ಹೆಚ್ಚಿನ ನೀರನ್ನು ಹೀರಿಕೊಳ್ಳುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಟವೆಲ್‌ ತರಿಸುವುದರಿಂದ ಪ್ರತಿ ಟವೆಲ್‌ಗೆ ತಗಲುವ ವೆಚ್ಚ ಇಳಿಕೆಯಾಗುವ ನಿರೀಕ್ಷೆ ಇದೆ. ಈ ಸಂಬಂಧ ಜೂ.26ರಂದು ಎಲ್ಲಾ ವಲಯಗಳ ರೈಲ್ವೆ ವ್ಯವಸ್ಥಾಪಕರಿಗೆ ಪತ್ರಗಳನ್ನು ಬರೆಯಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.