ದೆಹಲಿ-ಮುಂಬೈ ಜನತೆಗೆ ರೈಲ್ವೇ ಇಲಾಖೆ ದೀಪಾವಳಿ ಗಿಫ್ಟ್ ನೀಡುತ್ತಿದೆ. ಕಡಿಮೆ ಪ್ರಯಾಣ ದರದಲ್ಲಿ ವೇಗವಾದ ರಾಜಧಾನಿ ಎಕ್ಸ್’ಪ್ರೆಸ್ ದೆಹಲಿ-ಮುಂಬೈ ನಡುವೆ ಸಂಚರಿಸಲಿದೆ.

ನವದೆಹಲಿ (ಅ.13): ದೆಹಲಿ-ಮುಂಬೈ ಜನತೆಗೆ ರೈಲ್ವೇ ಇಲಾಖೆ ದೀಪಾವಳಿ ಗಿಫ್ಟ್ ನೀಡುತ್ತಿದೆ. ಕಡಿಮೆ ಪ್ರಯಾಣ ದರದಲ್ಲಿ ವೇಗವಾದ ರಾಜಧಾನಿ ಎಕ್ಸ್’ಪ್ರೆಸ್ ದೆಹಲಿ-ಮುಂಬೈ ನಡುವೆ ಸಂಚರಿಸಲಿದೆ.

ಈ ವಿಶೇಷ ರೈಲಿಗೆ ಅ.16 ರಂದು ಚಾಲನೆ ನೀಡಲಿದ್ದು, ದೆಹಲಿಯ ಹಜರತ್ ನಿಜಾಮುದ್ದೀನ್ ಸ್ಟೇಷನ್’ನಿಂದ ಬಾಂದ್ರಾ ಟರ್ಮಿನಸ್’ಗೆ ಸಂಚರಿಸಲಿದೆ. ರಾಜಧಾನಿ ವಿಶೇಷ ರೈಲು ಪ್ರಯಾಣ ದರವನ್ನು 2 ತಾಸು ಕಡಿಮೆ ಮಾಡುವುದರ ಜೊತೆಗೆ ಇನ್ನೆರಡು ರಾಜಧಾನಿ ಎಕ್ಸ್’ಪ್ರೆಸ್’ಗೆ ಹೋಲಿಸಿದರೆ ಪ್ರಯಾಣಿಕರಿಗೆ ಪ್ರಯಾಣದರ 600-800 ರೂ ಕಡಿಮೆಯಾಗಲಿದೆ. ದೆಹಲಿಯಿಂದ ಮುಂಬೈ ತಲುಪಲು 14 ತಾಸು ತೆಗೆದುಕೊಳ್ಳಲಿದೆ. ಕೋಟಾ, ವಡೋದರಾ ಮತ್ತು ಸೂರತ್ ಮೂರು ಸ್ಟಾಪ್’ಗಳನ್ನು ಮಾತ್ರ ಕೊಡಲಾಗುತ್ತದೆ.

ಈ ವಿಶೇಷ ರಾಜಧಾನಿ ರೈಲು ಪ್ರಾಥಮಿಕವಾಗಿ ಅ.16 ರಿಂದ ಜ. 16 ರವರೆಗೆ 3 ತಿಂಗಳು ಓಡಲಿದೆ. ವಾರಕ್ಕೆ ಮೂರು ದಿನಗಳ ಕಾಲ ಸಂಚರಿಸಲಿದೆ. ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದೇ ನಮ್ಮ ಉದ್ದೇಶ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.