ರಾಜ್ಯಗಳ ರಾಜಧಾನಿ ಮತ್ತು ಭಾರತದ ರಾಜಧಾನಿ ನವದೆಹಲಿ ನಡುವೆ ಸಂಪರ್ಕ ಕಲ್ಪಿಸುವ ರಾಜಧಾನಿ ಎಕ್’ಪ್ರೆಸ್ ರೈಲನ್ನು ದಿನದ 24ಗಂಟೆಯೂ ಓಡಿಸುವ ಬಗ್ಗೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ನವದೆಹಲಿ (ಡಿ.16): ರಾಜ್ಯಗಳ ರಾಜಧಾನಿ ಮತ್ತು ಭಾರತದ ರಾಜಧಾನಿ ನವದೆಹಲಿ ನಡುವೆ ಸಂಪರ್ಕ ಕಲ್ಪಿಸುವ ರಾಜಧಾನಿ ಎಕ್’ಪ್ರೆಸ್ ರೈಲನ್ನು ದಿನದ 24ಗಂಟೆಯೂ ಓಡಿಸುವ ಬಗ್ಗೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ಕಡೆ ತಪಾಸಣೆಗೆಂದು ಅರ್ಧಗಂಟೆ ನಿಲ್ಲಿಸುವುದನ್ನು ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲಿ ರಾಜಧಾನಿ ರೈಲನ್ನು ಓಡಿಸುವ ಪ್ರಸ್ತಾವನೆ ಡಿ.16ರಂದು ನಡೆಯಲಿರುವ ರೈಲ್ವೆ ಇಲಾಖೆ ಸಭೆಯಲ್ಲಿ ಚರ್ಚೆಗೆ ಬರಲಿದೆ. ಹಾಲಿ ದೇಶಾದ್ಯಂತ 23 ರಾಜಧಾನಿ ಎಕ್ಸ್’ಪ್ರೆಸ್ ರೈಲುಗಳು ಸಂಚರಿಸುತ್ತಿದ್ದು, ಇವು ದೇಶದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವ ರೈಲುಗಳಾಗಿವೆ.