ಹಾಲಿಯಿರುವ ಪಾವತಿಸಿ ಮತ್ತು ಉಪಯೋಗಿಸಿ ಯೋಜನೆಯನ್ನು ಬದಲಾಯಿಸಿ ಉಚಿತ ಇಲ್ಲವೆ ತೀರ ಕಡಿಮೆ ಹಣ ಪಾವತಿಸುವ ಯೋಜನೆಯಿದೆ.

ನವದೆಹಲಿ(ಫೆ.12): ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಹಿ ಸುದ್ದಿ ನೀಡಿದೆ. ಇನ್ನು ಕೆಲವು ದಿನಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿನ ಶೌಚಾಲಯಗಳಲ್ಲಿ ಹಣ ಪಾವತಿಸಬೇಕಾಗಿಲ್ಲ ಅಥವಾ ತೀರ ಕಡಿಮೆ ಹಣ ಪಾವತಿಸಬೇಕಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿಗೆ ನಡೆದ ರೈಲ್ವೆ ಮಂಡಳಿಯ ಸಭೆಯ ನೂತನ ಪ್ರಸ್ತಾವನೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು ಹಾಲಿಯಿರುವ ಪಾವತಿಸಿ ಮತ್ತು ಉಪಯೋಗಿಸಿ ಯೋಜನೆಯನ್ನು ಬದಲಾಯಿಸಿ ಉಚಿತ ಇಲ್ಲವೆ ತೀರ ಕಡಿಮೆ ಹಣ ಪಾವತಿಸುವ ಯೋಜನೆಯಿದೆ.

ಹಾಲಿ ಪದ್ಧತಿಯಂತೆ ಎಲ್ಲ ರೈಲ್ವೆಗಳ ಶೌಚಾಲಯಗಳಲ್ಲಿ 2 ರಿಂದ 20 ರೂ.ಗಳ ವರೆಗೂ ದರ ವಿಧಿಸಲಾಗುತ್ತದೆ. ಮಂಡಳಿ ರೂಪಿಸಿರುವ ನೂತನ ವರದಿಯಲ್ಲಿ ಶೌಚಾಲಯವಿರದ ಸಣ್ಣಪುಟ್ಟ ನಿಲ್ದಾಣಗಳಲ್ಲಿಯೂ ಪ್ರಯಾಣಿಕರ ಹಾಗೂ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ.