ಉದ್ಘಾಟನಾ ಕಾರ್ಯಕ್ರಮ 12.30ಕ್ಕೆ ನಿಗದಿಯಾಗಿತ್ತು. ಆದರೆ ಆ ಸಮಯದಲ್ಲಿ ಯಮಗಂಡಕಾಲ ಆರಂಭವಾಗುತ್ತದೆ. ಈ ವೇಳೆಯಲ್ಲಿ ಸಮಾರಂಭ ಆರಂಭಿಸದೆ 10.30 ಕ್ಕೆ ಕಾರ್ಯಕ್ರಮ ಆರಂಭಿಸುವಂತೆ ರೇವಣ್ಣ ಪಟ್ಟು ಹಿಡಿದರು.

ಬೆಂಗಳೂರು(ಮಾ.26): ಬೆಂಗಳೂರು-ಹಾಸನ ರೈಲು ಮಾರ್ಗ ಚಾಲನೆಗೆ ಯಮಗಂಡ ಕಾಲ ಅಡ್ಡಿಯಾಗಿದೆ. ಯಮಗಂಡ ಕಾಲದಲ್ಲಿ ಯೋಜನೆಗೆ ಚಾಲನೆ ಸಿಗದಂತೆ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಪಟ್ಟು ಹಿಡಿದ ಕಾರಣ ಒಂದು ಗಂಟೆ ಮುಂಚಿತವಾಗಿ ಕಾರ್ಯಕ್ರಮ ಆರಂಭವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉದ್ಘಾಟನಾ ಕಾರ್ಯಕ್ರಮ 12.30ಕ್ಕೆ ನಿಗದಿಯಾಗಿತ್ತು. ಆದರೆ ಆ ಸಮಯದಲ್ಲಿ ಯಮಗಂಡಕಾಲ ಆರಂಭವಾಗುತ್ತದೆ. ಈ ವೇಳೆಯಲ್ಲಿ ಸಮಾರಂಭ ಆರಂಭಿಸದೆ 10.30 ಕ್ಕೆ ಕಾರ್ಯಕ್ರಮ ಆರಂಭಿಸುವಂತೆ ರೇವಣ್ಣ ಪಟ್ಟು ಹಿಡಿದರು. ಜೆಡಿಎಸ್ ನಾಯಕನ ಮಾತಿನಿಂದ ಕೆಲ ಕಾಲ ರೈಲ್ವೇ ಅಧಿಕಾರಿಗಳು ಕಂಗಾಲಾದರು ಅಂತಿಮವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರವಾಗಿ ಕಾರ್ಯಕ್ರಮವನ್ನು 11.30ಕ್ಕೆ ಬದಲಾವಣೆ ಮಾಡಲಾಯಿತು.