1981ರಲ್ಲಿ ಮೋಟರ್ ವಾಹನದ ಇನ್ಸ್‌ಪೆಕ್ಟರ್ ಆಗಿ ಸೇವೆಗೆ ಸೇರಿದ್ದ ಅವರು, 7 ಅಪಾರ್ಟ್‌ಮೆಂಟ್‌ಗಳು, ವಿನುಕೊಂಡದಲ್ಲಿ ಎರಡು ಮನೆಗಳು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಎರಡು ಪ್ಲಾಟ್‌ಗಳು ಮತ್ತು ಮಿಲ್‌ಗಳ ಮಾಲೀಕತ್ವ ಹೊಂದಿದ್ದಾರೆ
ಹೈದರಾಬಾದ್(ಅ.26): ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರದ ನೌಕರ ಪೂರ್ಣಚಂದ್ರ ರಾವ್(55) ಅವರ ಹೆಸರಿನಲ್ಲಿ ಕನಿಷ್ಠ 14 ಮನೆಗಳು, ಮನೆ ತುಂಬಾ 60 ಕೆಜಿ ಬೆಳ್ಳಿ ಮತ್ತು 1 ಕೆಜಿ ಬಂಗಾರದ ವಸ್ತುಗಳು ಮತ್ತು 20 ಲಕ್ಷ ಪತ್ತೆಯಾಗಿವೆ. ಅಧಿಕಾರಿಯ ಮನೆಗಳಲ್ಲಿ ಒಂದು ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಕಾರಿಗಳು ದಾಳಿ ನಡೆಸಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. 1981ರಲ್ಲಿ ಮೋಟರ್ ವಾಹನದ ಇನ್ಸ್ಪೆಕ್ಟರ್ ಆಗಿ ಸೇವೆಗೆ ಸೇರಿದ್ದ ಅವರು, 7 ಅಪಾರ್ಟ್ಮೆಂಟ್ಗಳು, ವಿನುಕೊಂಡದಲ್ಲಿ ಎರಡು ಮನೆಗಳು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಎರಡು ಪ್ಲಾಟ್ಗಳು ಮತ್ತು ಮಿಲ್ಗಳ ಮಾಲೀಕತ್ವ ಹೊಂದಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹದ ಅಕಾರಿಗಳು ತಿಳಿಸಿದ್ದಾರೆ. ಪೂರ್ಣಚಂದ್ರ ರಾವ್ 3 ಕೋಟಿ ವೌಲ್ಯದ ಆಸ್ತಿ ಇದೆ ಎಂದು ಹೇಳುತ್ತಿದ್ದಾರೆ. ಆದರೆ, ಮಾರುಕಟ್ಟೆ ವೌಲ್ಯದ ಪ್ರಕಾರ ರಾವ್ ಆಸ್ತಿ 25 ಕೋಟಿಗಿಂತ ಹೆಚ್ಚು ಬೆಲೆ ಬಾಳುತ್ತದೆ. ಇನ್ನೂ ಹೆಚ್ಚಿನ ಆಸ್ತಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ಭ್ರಷ್ಟಾಚಾರ ನಿಗ್ರಹ ಅಕಾರಿ ದೇವಾನಂದ್ ಸಂತೊ ಹೇಳಿದ್ದಾರೆ.
Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
