ಸದಾ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಪ್ರಧಾನಿಗೆ ಮತ್ತೊಂದು ಸವಾಲು ಹಾಕಿದ್ದಾರೆ. ಸಂಸತ್​ನಲ್ಲಿ ಮಹಿಳಾ ಮೀಸಲು ವಿಧೇಯಕಕ್ಕೆ ಅಂಗೀಕಾರ ಮಾಡಿ... ಕಾಂಗ್ರೆಸ್​ ನಿಮಗೆ ಬೇಷರತ್​ ಬೆಂಬಲ ನೀಡಲಿದೆ ಎಂದಿದ್ದಾರೆ.

ನವದೆಹಲಿ[ಜು.16] ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಪ್ರಧಾನಿಗಳೇ ನಿಮಗೆ ಸವಾಲು ಹಾಕುತ್ತಿದ್ದೇನೆ ಎಂದಿರುವ ರಾಹುಲ್ ಟ್ವೀಟ್ ಮಾಡಿ ಎರಡು ಪತ್ರಗಳನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಸಬಲೀಕರಣ ವಿಚಾರ ಪಕ್ಷ ರಾಜಕೀಯಕ್ಕಿಂತ ಮಿಗಿಲಾಗಿ, ಪಾರ್ಲಿಮೆಂಟ್​ನಲ್ಲಿ ಮಹಿಳಾ ಮೀಸಲು ವಿಧೇಯಕ ಅಂಗೀಕಾರವಾಗಬೇಕಿದೆ. ಈ ಬಗ್ಗೆ ಅವರು ಮಾತನಾಡಬೇಕಿದೆ. ಬಿಲ್​ ಪಾಸ್ ಮಾಡುವುದಾದರೆ ಕಾಂಗ್ರೆಸ್ ಬೇಷರತ್​ ಬೆಂಬಲ ನೀಡುತ್ತದೆ ಎಂದಿದ್ದಾರೆ.

ಕಾಂಗ್ರೆಸ್​ ಪಕ್ಷ ಮುಸ್ಲಿಂ ಪುರುಷರ ಪರವಾಗಿ ಮಾತ್ರ ಇದೆಯೋ, ಮುಸ್ಲಿಂ ಮಹಿಳೆಯರ ಪರವಾಗಿಯೂ ಇದೆಯೋ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿಗೆ ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ಎಂಬಂತೆ ರಾಹುಲ್​ ಗಾಂಧಿ ಟ್ವೀಟ್ ಸವಾಲು ಹಾಕಿದ್ದಾರೆ. ಸದ್ಯ ರಾಹುಲ್ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಚಚರ್ಚೆ ಹುಟ್ಟು ಹಾಕಿವೆ.

Scroll to load tweet…