ಸ್ವತಃ ಟ್ವೀಟ್‌ ಮಾಡಿರುವ ರಾಹುಲ್‌, ನನ್ನ ಅಜ್ಜಿ ಮತ್ತು ಕುಟುಂಬ ಸದಸ್ಯರ ಜೊತೆ ಕೆಲ ಸಮಯ ಕಳೆಯುವ ನಿಟ್ಟಿನಲ್ಲಿ ವಿದೇಶಕ್ಕೆ ತೆರಳುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಸರ್ವಸಮ್ಮತ ಅಭ್ಯರ್ಥಿ ಕಣಕ್ಕಿಳಿಸಲು ಚರ್ಚೆ ನಡೆಯುತ್ತಿರುವ ಮತ್ತು ದೇಶಾದ್ಯಂತ ರೈತ ಸಮೂಹ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇಟಲಿ ಪ್ರವಾಸ ಆರಂಭಿಸಿದ್ದಾರೆ.

ಜೂನ್‌ 19ಕ್ಕೆ ರಾಹುಲ್‌ 49ನೇ ವರ್ಷಕ್ಕೆ ಕಾಲಿಡಲಿದ್ದು, ಇಟಲಿಯಲ್ಲೇ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಸಾಧ್ಯತೆ ಇದೆ.ಈ ಕುರಿತು ಸ್ವತಃ ಟ್ವೀಟ್‌ ಮಾಡಿರುವ ರಾಹುಲ್‌, ನನ್ನ ಅಜ್ಜಿ ಮತ್ತು ಕುಟುಂಬ ಸದಸ್ಯರ ಜೊತೆ ಕೆಲ ಸಮಯ ಕಳೆಯುವ ನಿಟ್ಟಿನಲ್ಲಿ ವಿದೇಶಕ್ಕೆ ತೆರಳುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ರಾಹುಲ್‌ರ ಅಜ್ಜಿ ಇಟಲಿಯಲ್ಲಿದ್ದಾರೆ. ಈ ಹಿಂದೆ ಸಂಸತ್‌ ಅಧಿವೇಶನ ನಡೆಯುತ್ತಿದ್ದ ವೇಳೆಯೇ ರಾಹುಲ್‌ ದೀರ್ಘ ಪ್ರವಾಸ ಕೈಗೊಂಡಿದ್ದರು.