ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವೈದ್ಯಕೀಯ ತಪಾಸಣೆಗಾಗಿ ಭಾನುವಾರ ರಾತ್ರಿ ವಿದೇಶಕ್ಕೆ ತೆರಳಿದ್ದಾರೆ. ಜೊತೆ ಅವರೊಂದಿಗೆ ಪುತ್ರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ತೆರಳಿದ್ದಾರೆ.
ನವದೆಹಲಿ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವೈದ್ಯಕೀಯ ತಪಾಸಣೆಗಾಗಿ ಭಾನುವಾರ ರಾತ್ರಿ ವಿದೇಶಕ್ಕೆ ತೆರಳಿದ್ದಾರೆ. ಜೊತೆ ಅವರೊಂದಿಗೆ ಪುತ್ರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ತೆರಳಿದ್ದಾರೆ.
ವಾರ್ಷಿಕ ವೈದ್ಯಕೀಯ ತಪಾಸಣೆಗಾಗಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. 2011ರಲ್ಲಿ ಅಮೆರಿಕದಲ್ಲಿ ಅವರು ಶಸ್ತ್ರಚಿಕಿತ್ಸೆಗೊಳಪಟ್ಟಿದ್ದರು. ರಾಹುಲ್ ವಾರದೊಳಗೆ ಹಿಂದಿರುಗುವ ಸಾಧ್ಯತೆಯಿದ್ದು, ಸೋನಿಯಾ ಇನ್ನೂ ಕೆಲವು ದಿನ ವಿದೇಶದಲ್ಲೇ ಉಳಿಯಲಿದ್ದಾರೆ ಎನ್ನಲಾಗಿದೆ.
ಹೀಗಾಗಿ ಕರ್ನಾಟಕದ ನೂತನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮತ್ತು ಪಕ್ಷದ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಮುಂದೂಡಲ್ಪಡುವ ಸಾಧ್ಯತೆಯಿದೆ.
