ರಾಹುಲ್ ಗಾಂಧಿ ನಿಪಾ ವೈರಸ್ ನಂತೆ : ಹರ್ಯಾಣ ಸಚಿವ

Rahul Is Like Nipah Virus Says Haryana Minister Anil Vij
Highlights

ಕೇರಳದಲ್ಲಿ 13 ಜನರನ್ನು ಬಲಿ ಪಡೆದಿರುವ ನಿಪಾ ವೈರಸ್‌ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೋಲಿಸಿರುವ ಹರ್ಯಾಣ ಸಚಿವ ಅನಿಲ್ ವಿಜ್ ಹೊಸ ವಿವಾದ ಸೃಷ್ಟಿಸಿದ್ದಾರೆ. 

ಚಂಡೀಗಢ: ಕೇರಳದಲ್ಲಿ 13 ಜನರನ್ನು ಬಲಿ ಪಡೆದಿರುವ ನಿಪಾ ವೈರಸ್‌ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೋಲಿಸಿರುವ ಹರ್ಯಾಣ ಸಚಿವ ಅನಿಲ್ ವಿಜ್ ಹೊಸ ವಿವಾದ ಸೃಷ್ಟಿಸಿದ್ದಾರೆ. 

ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ವಿಜ್ ‘ರಾಹುಲ್ ಗಾಂಧಿ ಅವರು ಬಲಿ ಪಡೆಯುವ ನಿಪಾ ವೈರಸ್ ಇದ್ದಂತೆ. ಅವರು ಯಾವುದೇ ಪಕ್ಷದ ಜತೆ ಸಂಪರ್ಕ ಸಾಧಿಸಿದರೂ, ಆ ಪಕ್ಷ ಸರ್ವನಾಶವಾಗುತ್ತದೆ. 

ಎಲ್ಲ ಪಕ್ಷಗಳು ಒಟ್ಟುಗೂಡಲು ಮುಂದಾಗುತ್ತಿದ್ದಾರೆ. ಆದರೆ, ಅವರೆಲ್ಲರ ಕಥೆ ಮುಗಿದಂತೆ,’ ಎಂದು ವ್ಯಂಗ್ಯವಾ ಡಿದ್ದಾರೆ. ಈ ಹಿಂದೆಯೂ ವಿಜ್ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದರು.

loader