ಗುಜರಾತ್ ವಿಧಾನಸಭೆ ಪ್ರಚಾರದ ವೇಳೆ ಒಂದಿಲ್ಲೊಂದು ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ವಿಧಾನ ಸಭೆ ಚುನಾವಣೆ ವೇಳೆ ರಾಜ್ಯದ ಎಲ್ಲ ಧರ್ಮಗಳ ಪೂಜಾ ಸ್ಥಳಗಳಿಗೆ ಭೇಟಿ ನೀಡುತ್ತಾರಂತೆ.

ನವದೆಹಲಿ(ಡಿ.18): ಗುಜರಾತ್ ವಿಧಾನಸಭೆ ಪ್ರಚಾರದ ವೇಳೆ ಒಂದಿಲ್ಲೊಂದು ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ವಿಧಾನ ಸಭೆ ಚುನಾವಣೆ ವೇಳೆ ರಾಜ್ಯದ ಎಲ್ಲ ಧರ್ಮಗಳ ಪೂಜಾ ಸ್ಥಳಗಳಿಗೆ ಭೇಟಿ ನೀಡುತ್ತಾರಂತೆ.

ಖುದ್ದು ಕಾಂಗ್ರೆಸ್ ಮುಖಂಡರು ಈ ರೀತಿ ಹೇಳಿಕೆ ನೀಡಿದ್ದಾರೆ. ಇಂಗ್ಲಿಷ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಕರ್ನಾಟಕದ ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, `ರಾಹುಲ್ ಗುಜರಾತ್’ನಲ್ಲಿ ಹಿಂದುಗಳನ್ನು ಓಲೈಸಲು ಭೇಟಿ ನೀಡಿದ್ದರು ಎಂದು ಆರೆಸ್ಸೆಸ್ ಅಪಪ್ರಚಾರ ಮಾಡಿತು. ಮಂದಿರಗಳಲ್ಲಿ ನಂಬಿಕೆ ಇದ್ದವರನ್ನು ಗೌರವಿಸುವ ಕಾರಣದಿಂದ ರಾಹುಲ್ ಅವರು ಅಲ್ಲಿಗೆ ಭೇಟಿ ನೀಡಿದರು.

ಕರ್ನಾಟಕದಲ್ಲಿ ಅವರು ವಿಧಾನಸಭೆ ಚುನಾವಣೆಗೆ ಪ್ರಚಾರಕ್ಕೆ ಬಂದಾಗ ಎಲ್ಲ ಧರ್ಮಗಳ ಪೂಜಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಏಕೆಂದರೆ ರಾಹುಲ್ ಎಲ್ಲ ಧರ್ಮಗಳನ್ನು ಗೌರವಿಸುತ್ತಾರೆ. ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲವು ಅಚಲವಾಗಿದೆ' ಎಂದರು.