ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಜನಾಶೀರ್ವಾದ ರಾರ‍ಯಲಿಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಅಜ್ಜಿಗೆ ಸರ್‌ಪ್ರೈಸ್‌ ನೀಡಲು ಇಟಲಿಗೆ ತೆರಳಿದ್ದಾರೆ.

ನವದೆಹಲಿ: ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಜನಾಶೀರ್ವಾದ ರಾರ‍ಯಲಿಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಅಜ್ಜಿಗೆ ಸರ್‌ಪ್ರೈಸ್‌ ನೀಡಲು ಇಟಲಿಗೆ ತೆರಳಿದ್ದಾರೆ.

ಅಲ್ಲದೆ, ಅಜ್ಜಿಯ ಜತೆಯೇ ಹೋಳಿ ಹಬ್ಬ ಆಚರಣೆ ಮಾಡಲಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ಗುರುವಾರ ಪ್ರಕಟಿಸಿರುವ ರಾಹುಲ್‌ ಗಾಂಧಿ, ‘ನನ್ನ ಅಜ್ಜಿಗೆ ಇದೀಗ 93 ವರ್ಷ. ಪ್ರಸ್ತುತ ಹೋಳಿ ವೀಕೆಂಡ್‌ ಅನ್ನು ಅಜ್ಜಿಯ ಜತೆ ಆಚರಿಸಲು ಮತ್ತು ಅವರಿಗೆ ಸರ್‌ಪ್ರೈಸ್‌ ನೀಡಲು ಇಟಲಿಗೆ ಹೊರಟಿದ್ದೇನೆ.

ಆಕೆಯ ಅಪ್ಪುಗೆ ಸ್ವೀಕಾರಕ್ಕೆ ಹೆಚ್ಚು ಕಾಯಲು ಅಸಾಧ್ಯ,’ ಎಂದು ಉಲ್ಲೇಖಿಸುವ ಮೂಲಕ ತಮ್ಮ ಅಜ್ಜಿಯ ಬಗೆಗಿನ ಅವರ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಈ ನಡುವೆ, ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್‌ ಗೆಲುವು ಭವಿಷ್ಯದ ದಿಕ್ಸೂಚಿ ಎಂದು ರಾಹುಲ್‌ ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.