Asianet Suvarna News Asianet Suvarna News

ಹುಟ್ಟುಹಬ್ಬಕ್ಕೆ ಶುಭ ಕೋರಿದ ಮೋದಿಗೆ, ರಾಹುಲ್ ಥ್ಯಾಂಕ್ಸ್ ಹೇಳಿದ್ದು ಹೀಗೆ!

ರಾಹುಲ್ ಗಾಂಧಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರ| ಪ್ರಧಾನಿ ಮೋದಿಯೂ ಟ್ವೀಟ್ ಮೂಲಕ ಮಾಡಿದ್ರು ವಿಶ್| ಮೋದೀಜೀಗೆ ಥ್ಯಾಂಕ್ಸ್ ಎಂದ ಕಾಂಗ್ರೆಸ್ ಅಧ್ಯಕ್ಷ!

Rahul Gandhi Tweets Thank You To PM Modi For Birthday Greetings
Author
Bangalore, First Published Jun 19, 2019, 2:06 PM IST

ನವದೆಹಲಿ[ಜೂ.19]: ಪ್ರಧಾನಿ ನರೇಂದ್ರ ಮೋದಿ ಬುಧವಾರದಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾಹುಲ್ ಗಾಂಧಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ 'ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡಲಿ' ಎಂದಿದ್ದಾರೆ. 

ಇತ್ತೀಚೆಗಷ್ಟೇ ನಡೆದಿದ್ದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಉಭಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು. ಈ ಚುನಾವಣೆಯಲಗಲಿ ಬಿಜೆಪಿ ಭಾರೀ ಅಂತರದ ಗೆಲುವು ದಾಖಲಿಸಿತ್ತು. ಇದೀಗ ನರೇಂದ್ರ ಮೋದಿಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ 'ನಿಮ್ಮ ಶುಭಾಶಯಕ್ಕೆ ಧನ್ಯವಾದ ನರೇಂದ್ರ ಮೋದೀಜೀ, ನಾನಿದನ್ನು ಗೌರವಿಸುತ್ತೇನೆ' ಎಂದಿದ್ದಾರೆ.

ಥ್ಯಾಂಕ್ಯೂ ರಾಜಮ್ಮ: ಮಗುವಾಗಿದ್ದಾಗ ತನ್ನ ಆರೈಕೆ ಮಾಡಿದ್ದ ನರ್ಸ್ ಭೇಟಿಯಾದ ರಾಹುಲ್!

 

ರಾಹುಲ್ ಗಾಂಧಿ 1970ರ ಜುಲೈ 19ರಂದು ಜನಿಸಿದ್ದರು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಇಂದು 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಿರುವಾಗ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶುಭ ಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ #IAmRahulGandhi ಹಾಗೂ #HappyBirthdayRahulGandhi ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. 

ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ 'ಭಾರತೀಯರನ್ನು  ಅವರು ಎಲ್ಲೆಡೆ ಪ್ರೇರೇಪಿಸಿದ 5 ಕ್ಷಣಗಳು' ಎಂಬ ಶೀರ್ಷಿಕೆಯಡಿ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. 

ಮಾಜಿ ಸಿಎಂ ಹಾಗೂ ಕಾಂಗ್ರೆಸ್, ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡಾ ರಾಹುಲ್ ಗಾಂಧಿಗೆ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಮೇಲಿನ ಕಾಳಜಿ ಹಾಗೂ ಜನರ ಮೇಲಿನ ಅವರ ಕಾಳಜಿಯನ್ನು ಕೊಂಡಾಡಿದ್ದಾರೆ.

ಇಷ್ಟೇ ಅಲ್ಲದೇ ರಾಹುಲ್ ಗಾಂಧಿ ನಿವಾಸದ ಹೊರಗೆ, ಕಾಂಗ್ರೆಸ್ ಕಾರ್ಯಕರ್ತ ಫೂಲ್ ಸಿಂಗ್ ಹೋಮ ಹವನ ಮಾಡುತ್ತಿರುವ ದೃಶ್ಯಗಳೂ ಕಂಡು ಬಂದಿವೆ.
 

Follow Us:
Download App:
  • android
  • ios