ನಡ್ಡಾ ವಿರುದ್ಧ ರಾಹುಲ್ ಸಮರ, ಗಗನಕ್ಕೇರಿದೆ ಪೆಟ್ರೋಲ್ ದರ; ಜ.20ರ ಟಾಪ್ 10 ಸುದ್ದಿ!
ರಾಹುಲ್ ಗಾಂಧಿ ಹಾಗೂ ಜೆಪಿ ನಡ್ಡ ನಡುವೆ ಸಮರ ಆರಂಭಗೊಂಡಿದೆ. ಇತ್ತ ಗುಜರಾತ್ ಸರ್ಕಾರ ತೆಗೆದುಕೊಂಡು ಹಣ್ಣಿನ ಹೆಸರು ಬದಲಿಸುವ ನಿರ್ಧಾರ ಇದೀಗ ಸಖತ್ ಟ್ರೋಲ್ ಆಗಿದೆ. ಜೋ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಸಾರ್ವಕಾಲಿಕ ಗರಿಷ್ಠ, ಸನ್ನಿ ಲಿಯೋನ್ ಹೇಳಿದ ಬಾಲ್ಯದ ದೌರ್ಜನ್ಯದ ವಿವರ ಸೇರಿದಂತೆ ಜನವರಿ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ನಗರ ಆಯ್ತು ಇದೀಗ ಡ್ರ್ಯಾಗನ್ ಫ್ರೂಟ್ ಹೆಸರು ಬದಲಿಸಿದ ಗುಜರಾತ್ ಸರ್ಕಾರ!...
ಉತ್ತರ ಪ್ರದೇಶ ಸರ್ಕಾರ ನಗರ ಪಟ್ಟಣದ ಹೆಸರು ಬದಲಿಸಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಗುಜರಾತ್ ಸರ್ಕಾರ ಡ್ರ್ಯಾಗನ್ ಫ್ರೂಟ್ ಹೆಸರನ್ನೇ ಬದಲಿಸಿದೆ. ಹೊಸ ಹೆಸರು ಹಾಗೂ ಅದಕ್ಕೆ ಬಂದಿರುವ ಪ್ರತಿಕ್ರಿಯೆ ಇನ್ನೂ ಅದ್ಬುತವಾಗಿದೆ.
'ನಡ್ಡಾ ಯಾರ್ರೀ? ಅವರಿಗೇಕೆ ನಾವು ಉತ್ತರಿಸಬೇಕು?'...
ಅರುಣಾಚಲ ಪ್ರದೇಶದ ಭಾಗವನ್ನು ಚೀನಾ ಅತಿಕ್ರಮಿಸಿಕೊಂಡು ಹಳ್ಳಿ ನಿರ್ಮಿಸಿದೆ ಎಂಬ ವಿಚಾರವು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡುವೆ ನೇರಾನೇರ ವಾಕ್ಸಮರಕ್ಕೆ ನಾಂದಿ ಹಾಡಿದೆ. ‘ಅರುಣಾಚಲ ಸಾವಿರಾರು ಕಿ.ಮೀ. ಪ್ರದೇಶವನ್ನು ಚೀನಾಗೆ ಬಳುವಳಿ ಕೊಟ್ಟಿದ್ದು ಪಂ. ನೆಹರು’ ಎಂದು ನಡ್ಡಾ ಆರೋಪಿಸಿದ್ದರೆ, ‘ಯಾರ್ರೀ ಜೆ.ಪಿ. ನಡ್ಡಾ? ಅವರಿಗೇಕೆ ನಾನು ಉತ್ತರಿಸಬೇಕು?’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಆಸ್ಟ್ರೇಲಿಯಾ ಎದುರು ಭಾರತ ಹೀನಾಯವಾಗಿ ಸೋಲಲಿದೆ; ಟೀಕಾಕಾರರ ಬಾಯಿ ಮುಚ್ಚಿಸಿದ ಯಂಗಿಸ್ತಾನ್..!...
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಕಾಂಗರೂ ನಾಡಿನಲ್ಲಿ ಭಾರತ 2-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಟ್ರಂಪ್ ಅಧಿಕಾರವಧಿಯ ಯುಗಾಂತ್ಯ, ನೂತನ ಅಧ್ಯಕ್ಷರಾಗಿ ಬೈಡೆನ್ ಪ್ರಮಾಣ ವಚನ...
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಇಡೀ ವಿಶ್ವದ ಗಮನವನ್ನು ಸೆಳೆದಿತ್ತು. ಟ್ರಂಪ್ ಮೊಂಡಾಟ ವಿಶ್ವದ ಎದುರು ಜಗಜ್ಜಾಹಿರಾಗಿತ್ತು. ಇದೀಗ ಚುನಾವಣೆಯಲ್ಲಿ ರೋಚಕ ಗೆಲುವು ಕಂಡ ಡೆಮಾಕ್ರೆಟ್ ಪಕ್ಷದ ಜೋ ಬೈಡೆನ್ 46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಾಲ್ಯದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಸನ್ನಿ ಹೇಳಿದ್ದಿಷ್ಟು..!...
ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ಪ್ರೊಫೆಷನ್ ಮತ್ತು ಫ್ಯಾಮಿಲಿ ಲೈಫ್‌ನಲ್ಲಿ ಹ್ಯಾಪಿ ನಟಿ. ಅತ್ತ ಫ್ಯಾಮಿಲಿಯೂ ಖುಷಿ, ಸಿನಿಮಾ ವಿಚಾರದಲ್ಲೂ ಖುಷಿ. ಇದೀಗ ಬಾಲ್ಯದಲ್ಲಿ ಎದುರಿಸಿದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ ಸನ್ನಿ.
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಸಾರ್ವಕಾಲಿಕ ಗರಿಷ್ಠ!...
ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಮಂಗಳವಾರ ಮತ್ತೊಂದು ಸಾರ್ವಕಾಲಿಕ ದಾಖಲೆ ಸ್ಥಾಪಿಸಿವೆ. ಪೆಟ್ರೋಲ್ ದರ 25 ಪೈಸೆ ಏರಿದ್ದು, ದಿಲ್ಲಿಯಲ್ಲಿ ಇದೇ ಮೊದಲ ಬಾರಿಗೆ 85 ರು. ದಾಟಿದೆ. ಇನ್ನು ಬೆಂಗಳೂರಿನಲ್ಲೂ ದಾಖಲೆಯ 88.07 ರು.ಗೆ ಪೆಟ್ರೋಲ್ ದರ ಏರಿದೆ.
ನಿಯಮ ಎಲ್ಲರಿಗೂ ಒಂದೇ; ಸಚಿವರ ಕಾರಿನ ಟಿಂಟೆಡ್ ಗ್ಲಾಸ್, ಕರ್ಟೈನ್ ತೆಗೆಯಲು ಸೂಚನೆ!...
ಮೋಟಾರು ವಾಹನ ಕಾಯ್ದೆಯಲ್ಲಿ ಹಲವು ತಿದ್ದುಪಡಿಗಳಾಗಿದೆ. ಇದರಲ್ಲಿ ಕಾರಿನ ಗಾಜಿಗೆ ಟಿಂಟೆಡ್ ಗ್ಲಾಸ್ ಬಳಕೆ ಮಾಡುವುದು ನಿಷೇಧಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶ. ಆದರೆ ಜನ ಸಾಮಾನ್ಯರು ಈ ನಿಯಮ ಪಾಲಿಸಿದರೆ, ಕೆಲ ರಾಜಕಾರಣಿಗಳು, ಶಾಸಕರು, ಸಚಿವರ ಕಾರಿನಲ್ಲಿ ಈಗಲೂ ಸನ್ ಫಿಲ್ಮ್ ಬಳಕೆ ಮಾಡುವುದನ್ನು ಕಾಣಬಹುದು. ಇದೀಗ ಖಡಕ್ ವಾರ್ನಿಂಗ್ ನೀಡಲಾಗಿದೆ
ಮಗನಿಗಾಗಿ ಅಧಿಕಾರ ದುರ್ಬಳಕೆ ಆರೋಪ, ಸುಮಲತಾ ಸ್ಪಷ್ಟನೆ ಇದು..!...
ಎಲ್ಲಾ ವಿಷ್ಯದಲ್ಲೂ ಮಂಡ್ಯ ನಂಬರ್ 1 ಇರಬೇಕು ಅನ್ನೋದು ನನ್ನ ಆಸೆ. ಮೈಷುಗರ್ ಕಾರ್ಖಾನೆ ಖಾಸಗಿ ಅಥವಾ ಸರ್ಕಾರ ನಡೆಸುವ ಬಗ್ಗೆ ತೀರ್ಮಾನ ಮಾಡುವುದು ಸರ್ಕಾರ. ಯಾವ ರೀತಿ ಆದರೂ ಸರಿ ಕಾರ್ಖಾನೆ ತೆರೆದು ರೈತರಿಗೆ ಅನುಕೂಲ ಮಾಡಿ ಎಂದು ಒತ್ತಾಯಿಸುತ್ತೇನೆ ಎಂದು ಸುಮಲತಾ ಸ್ಪಷ್ಟನೆ ನೀಡಿದ್ದಾರೆ.
ಟಿಆರ್‌ಪಿ ಕೇಸ್: BARC ಮಾಜಿ ಸಿಇಓ ದಾಸ್ ಗುಪ್ತಾಗೆ ಬಿಗ್ ಶಾಕ್, ಜಾಮೀನು ಅರ್ಜಿ ವಜಾ!...
ಟಿಆರ್‌ಪಿ ಪ್ರಕರಣದಲ್ಲಿ BARC ಮಾಜಿ ಸಿಇಓ ದಾಸ್ ಗುಪ್ತಾಗೆ ಬಿಗ್ ಶಾಕ್| ಗುಪ್ತಾ ಜಾಮೀನು ಅರ್ಜಿ ನಿರಾಕರಿಸಿದ ಕೋರ್ಟ್| ಇಡೀ ದೇಶದ ಗಮನ ಸೆಳೆದಿದ್ದ ಟಿಆರ್ಪಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ದಾಸ್ ಗುಪ್ತಾ
ಮಂಗಳೂರು; ಕಲ್ಲೆಸೆದ ಮಾಯಾ ಗ್ಯಾಂಗ್‌ನ ಮತ್ತೊಂದು ಸಂಚು!...
ವರ್ಷದ ಹಿಂದೆ ಮಂಗಳೂರು ಹೊತ್ತಿ ಉರಿದಿತ್ತು. ಪೊಲೀಸರ ಮೇಲೆಯೇ ಸೇಡಿಗೆ ಸಿದ್ಧವಾಗಿತ್ತು ಗ್ಯಾಂಗ್.. ಆ ಗ್ಯಾಂಗ್ ಮಾಡಿಕೊಂಡಿದ್ದ ಸಂಚೇನು?