Asianet Suvarna News Asianet Suvarna News

ಟಿಆರ್‌ಪಿ ಕೇಸ್: BARC ಮಾಜಿ ಸಿಇಓ ದಾಸ್ ಗುಪ್ತಾಗೆ ಬಿಗ್ ಶಾಕ್, ಜಾಮೀನು ಅರ್ಜಿ ವಜಾ!

ಟಿಆರ್‌ಪಿ ಪ್ರಕರಣದಲ್ಲಿ BARC ಮಾಜಿ ಸಿಇಓ ದಾಸ್ ಗುಪ್ತಾಗೆ ಬಿಗ್ ಶಾಕ್| ಗುಪ್ತಾ ಜಾಮೀನು ಅರ್ಜಿ ನಿರಾಕರಿಸಿದ ಕೋರ್ಟ್| ಇಡೀ ದೇಶದ ಗಮನ ಸೆಳೆದಿದ್ದ ಟಿಆರ್ಪಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ದಾಸ್ ಗುಪ್ತಾ

CEO Partho Dasgupta who is an accused in the TRP scam pod
Author
Bangalore, First Published Jan 20, 2021, 4:06 PM IST

ಮುಂಬೈ(ಜ.20) ಟಿಆರ್‌ಪಿ ಪ್ರಕರಣದಲ್ಲಿ BARC ಮಾಜಿ ಸಿಇಓ ದಾಸ್ ಗುಪ್ತಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಇದಕ್ಕೂ ಮುನ್ನ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೊಸ್ವಾಮಿ ಎರಡು ಚಾನೆಲ್‌ಗಳ ರೇಟಿಂಗ್ ಹೆಚ್ಚಿಸಲು BARC ಮಾಜಿ ಸಿಇಓ ದಾಸ್‌ ಗುಪ್ತಾಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರೆಂದು ತಿಳಿಸಿದ್ದರು. ಪೊಲೀಸರು ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಇಂತಹುದ್ದೊಂದು ವಾದ ಮಂಡಿಸಿದ್ದರು.

ಗುಪ್ತಾ BARC ಸಿಇಓ ಆಗಿದ್ದ ಸಂದರ್ಭದಲ್ಲಿ ಅರ್ನಬ್ ಗೊಸ್ವಾಮಿ ಹಾಗೂ ಇತರ ಆರೋಪಿಗಳು ರಿಪಬ್ಲಿಕ್ ಭಾರತ್ ಹಾಗೂ ರಿಪಬ್ಲಿಕ್ ಟಿಬಿಯ ರೇಟಿಂಗ್‌ನ್ನು ಅಕ್ರಮವಾಗಿ ಹೆಚ್ಚಿಸಿದ್ದರೆಂದು ಪೊಲಿಸರು ತಿಳಿಸಿದ್ದರು. ಈ ನಿಟ್ಟಿನಲ್ಲಿ ದಾಸ್‌ ಗುಪ್ತಾಗೆ ಅರ್ನಬ್ ಗೋಸ್ವಾಮಿ ಹಲವಾರು ಸಂದರ್ಭದಲ್ಲಿ ಭಾರಿ ಮೊತ್ತ ನೀಡಿದ್ದಾರೆಂದೂ ಪೊಲೀಸರು ವಾದಿಸಿದ್ದರು.

ಏನಿದು ಪ್ರಕರಣ?

ಮುಂಬೈ ಪೊಲೀಸರು ಕಳೆದ ಕೆಲ ಸಮಯದ ಹಿಂದೆ ಟಿಆರ್‌ಪಿ ಹಗರಣ ಸಂಬಂಧ ಬಹುದೊಡ್ಡ ರಹಸ್ಯ ಬೇಧಿಸಿದ್ದರು. ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ಈ ಬಗ್ಗೆ ಮಾತನಾಡುತ್ತಾ ರಿಪಬ್ಲಿಕ್ ಟಿವಿ ಸೇರಿ ಮೂರು ಚಾನೆಲ್‌ಗಳು ಟಿಆರ್‌ಪಿ ಗೋಲ್‌ಮಾಲ್ ನಡೆಸಿವೆ ಎಂದು ಆರೋಪಿಸಿದ್ದರು. ಅಲ್ಲದೇ ಜನರಿಗೆ ಹಣ ನೀಡಿ ಮನೆಯಲ್ಲಿ ರಿಪಬ್ಲಿಕ್ ಟಿವಿ ಚಾನೆಲ್ ಆನ್ ಇಡುವಂತೆಯೂ ಹೇಳುತ್ತಾರೆ ಎಂದೂ ಆರೋಪಿಸಿದ್ದರು.  

Follow Us:
Download App:
  • android
  • ios