ನಿಯಮ ಎಲ್ಲರಿಗೂ ಒಂದೇ; ಸಚಿವರ ಕಾರಿನ ಟಿಂಟೆಡ್ ಗ್ಲಾಸ್, ಕರ್ಟೈನ್ ತೆಗೆಯಲು ಸೂಚನೆ!
ಮೋಟಾರು ವಾಹನ ಕಾಯ್ದೆಯಲ್ಲಿ ಹಲವು ತಿದ್ದುಪಡಿಗಳಾಗಿದೆ. ಇದರಲ್ಲಿ ಕಾರಿನ ಗಾಜಿಗೆ ಟಿಂಟೆಡ್ ಗ್ಲಾಸ್ ಬಳಕೆ ಮಾಡುವುದು ನಿಷೇಧಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶ. ಆದರೆ ಜನ ಸಾಮಾನ್ಯರು ಈ ನಿಯಮ ಪಾಲಿಸಿದರೆ, ಕೆಲ ರಾಜಕಾರಣಿಗಳು, ಶಾಸಕರು, ಸಚಿವರ ಕಾರಿನಲ್ಲಿ ಈಗಲೂ ಸನ್ ಫಿಲ್ಮ್ ಬಳಕೆ ಮಾಡುವುದನ್ನು ಕಾಣಬಹುದು. ಇದೀಗ ಖಡಕ್ ವಾರ್ನಿಂಗ್ ನೀಡಲಾಗಿದೆ
ಕಾರಿನ ಗಾಜಿಗೆ ಸನ್ ಫಿಲ್ಮ್ ಬಳಕೆ ಮಾಡುವುದು ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ ನೀಡಿದ ಆದೇಶ ಬಹುತೇಕರು ಪಾಲಿಸುತ್ತಿದ್ದಾರೆ. ಆದರೆ ಕೆಲವೇ ಕೆಲವು ರಾಜಕಾರಣಿಗಳ ಕಾರಿನಲ್ಲೂ ಈಗಲೂ ಸನ್‌ಫಿಲ್ಮ್ ಬಳಕೆ ಕಾಣಬಹುದು.
ಇದೀಗ ಕೇರಳ ಮೋಟಾರು ಇಲಾಖೆ ಖಡಕ್ ಸೂಚನೆ ನೀಡಿದೆ. ಕೇರಳ ಟೂರಿಸಂ ಕಾರುಗಳಲ್ಲಿ ಈಗಲೂ ಸನ್ ಫಿಲ್ಮ್ ಬಳಕೆ ಮತ್ತು ವಿಂಡೋ ಬಳಿ ಕರ್ಟೈನ್ ಬಳಕೆ ಮಾಡುತ್ತಿದ್ದಾರೆ.
ಟೋರಿಸಂ ವಿಭಾಗದ ವಾಹನಗಳಲ್ಲಿನ ಕರ್ಟೈನ್ ಹಾಗೂ ಟಿಂಟೆಡ್ ಗ್ಲಾಸ್ ತೆಗೆಯಲು ಸೂಚಿಸಲಾಗಿದೆ. ಇಷ್ಟೇ ಅಲ್ಲ ಈ ಮೂಲಕ ಯಾವ ರಾಜಕಾರಣಿಗಳು ಕೂಡ ಟಿಂಡೆಡ್ ಗ್ಲಾಸ್ ಬಳಸಬಾರದು ಎಂದು ಸೂಚನೆ ನೀಡಿದೆ.
ಟ್ರಾನ್ಸ್‌ಪೋರ್ಟ್ ಕಮಿಶನ್ ಇದೀಗ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದಿದೆ. ನಿಯಮ ಉಲ್ಲಂಘನೆ ಗಂಭೀರ ಅಪರಾಧ ಎಂದಿದೆ. ಇಷ್ಟೇ ಅಲ್ಲ ನಿಯಮ ಎಲ್ಲರಿಗೂ ಒಂದೇ ಎಂದು ಸ್ಪಷ್ಟವಾಗಿ ಹೇಳಿದೆ.
ಕೇರಳ ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ಸರ್ಕಾರ ನೀಡಿರುವ ಕಾರಿನಲ್ಲಿ ಈಗಲೂ ಸನ್ ಫಿಲ್ಮ್ ಬಳಕೆ ಮಾಡುತ್ತಿದ್ದಾರೆ. ಇನ್ನು ವಿಂಡೋ ಬಳಿ ಕರ್ಟೈನ್ ಕೂಡ ಹಾಕಲಾಗಿದೆ.
ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಮೋಟಾರು ವಾಹನ ಇಲಾಖೆ ಇದೀಗ ಕೇರಳ ಯಾವುದೇ ಸಚಿವರು, ಶಾಸಕರು, ರಾಜಕಾರಣಿಗಳು ಸೇರಿದಂತೆ ಯಾರೂೂ ಕೂಡ ನಿಯಮ ಉಲ್ಲಂಘಿಸಬಾರದು ಎಂದು ಸೂಚಿಸಿದೆ.
ಕೇರಳ ಪ್ರವಾಸೋದ್ಯಮ ಸಚಿವರ ಕಾರು ಸೇರಿದಂತೆ ಇದೀಗ ಕೇರಳದ ಕೆಲ ಸಚಿವರು ತಮ್ಮ ಕಾರಿನ ಸನ್ ಫಿಲ್ಮ್ ಹಾಗೂ ಕರ್ಟೈನ್ ತೆಗೆದಿದ್ದಾರೆ.