ನವದೆಹಲಿ (ಅ.07): ಸರ್ಜಿಕಲ್ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರು ಹುತಾತ್ಮ ಯೋಧರ ತ್ಯಾಗವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಗುರುವಾರ ದೆಹಲಿಯಲ್ಲಿ ‘ದಿಯೋರಿಯಾ ಟು ದಿಲ್ಲಿ ಕಿಸಾನ್‌ ಯಾತ್ರೆ'ಯ ಸಮಾರೋಪ ಸಮಾ​ರಂಭದಲ್ಲಿ ಮಾತನಾಡಿದ ರಾಹುಲ್‌, ‘‘ನಮ್ಮ ಯೋಧರು ದೇಶಕ್ಕಾಗಿ ತಮ್ಮ ನೆತ್ತರು ಹರಿಸಿದ್ದಾರೆ. ಹಿಂದುಸ್ಥಾನಕ್ಕಾಗಿ ಸರ್ಜಿಕಲ್‌ ದಾಳಿ ನಡೆಸಿದ್ದಾರೆ. ಇಂಥ ಯೋಧರ ರಕ್ತದ ಹಿಂದೆ ಪ್ರಧಾನಿ ಮೋದಿ ಅವರು ಅಡಗಿಕುಳಿತಿದ್ದಾರೆ. ಯೋಧರನ್ನು ದಲ್ಲಾಳಿಗಳಂತೆ ಬಳಸುತ್ತಿದ್ದಾರೆ. ಸೈನಿಕರ ತ್ಯಾಗವನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ತಪ್ಪು,'' ಎಂದಿದ್ದಾರೆ.

‘‘ಭಾರತೀಯ ಸೇನೆಯು ದೇಶಕ್ಕಾಗಿ ತನ್ನ ಕೆಲಸವನ್ನು ಚೆನ್ನಾಗಿ ಮಾಡಿದೆ. ನೀವು ನಿಮ್ಮ ಕೆಲಸ ಮಾಡಿ,'' ಎಂದು ರಾಹುಲ್‌ ಗಾಂಧಿ ಪ್ರಧಾನಿಗೆ ಹೇಳಿದ್ದಾರೆ.