ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಿಂಗಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯ ಘಟನೆ ನೆನೆದು ಭಾವುಕರಾದ ಕ್ಷಣ ಎದುರಾಯಿತು. ಎಲ್‌ಟಿಟಿಇಯಿಂದ ಹತರಾದ ತಮ್ಮ ತಂದೆ ರಾಜೀವ್‌ ಗಾಂಧಿಯ ಹಂತಕರನ್ನು ತಾವು ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಸಂಪೂರ್ಣವಾಗಿ ಕ್ಷಮಿಸಿದ್ದೇವೆ ಎಂದು ಅವರು ತಿಳಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಸಿಂಗಾಪುರ: ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಿಂಗಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯ ಘಟನೆ ನೆನೆದು ಭಾವುಕರಾದ ಕ್ಷಣ ಎದುರಾಯಿತು. ಎಲ್‌ಟಿಟಿಇಯಿಂದ ಹತರಾದ ತಮ್ಮ ತಂದೆ ರಾಜೀವ್‌ ಗಾಂಧಿಯ ಹಂತಕರನ್ನು ತಾವು ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಸಂಪೂರ್ಣವಾಗಿ ಕ್ಷಮಿಸಿದ್ದೇವೆ ಎಂದು ಅವರು ತಿಳಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ತುಂಬಾ ವರ್ಷಗಳ ವರೆಗೆ ನಾವು ಮೌನವಾಗಿದ್ದೆವು ಮತ್ತು ನೋವು ಅನುಭವಿಸಿದ್ದೆವು. ಆದರೆ ಅದುಹೇಗೋ, ನಾವು ಅವರನ್ನು ಸಂಪೂರ್ಣವಾಗಿ ಕ್ಷಮಿಸಿದ್ದೇವೆ’ ಎಂದು ಭಾವುಕರಾದ ರಾಹುಲ್‌ ಪ್ರೇಕ್ಷಕರ ಭಾರೀ ಕರತಾಡನದ ನಡುವೆ ಹೇಳಿದರು.

ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಗ್ಗೆಯೂ ಅವರು ಸ್ಮರಿಸಿದರು. ದಿಟ್ಟನಿರ್ಧಾರ ಕೈಗೊಂಡಿದ್ದುದಕ್ಕಾಗಿ ತಮ್ಮ ಕುಟುಂಬ ತೆತ್ತ ಬೆಲೆ ಇದು ಎಂದು ಅಜ್ಜಿ ಮತ್ತು ತಂದೆಯ ಹತ್ಯೆಗಳನ್ನು ಅವರು ಸ್ಮರಿಸಿದರು. ‘ರಾಜಕೀಯದಲ್ಲಿ ತಪ್ಪಾದ ಶಕ್ತಿಗಳೊಂದಿಗೆ ಗೊಂದಲಕ್ಕೊಳಗಾಗಿದ್ದಾಗ, ನೀವು ಒಂದು ನಿರ್ಧಾರ ಕೈಗೊಂಡಾಗ, ನೀವು ಸಾಯುತ್ತೀರಿ’ ಎಂದು ರಾಹುಲ್‌ ವಿಷಾಧಿಸಿದರು.

‘ನಮ್ಮ ತಂದೆ ಸಾಯಲಿದ್ದಾರೆ ಎಂದು ನಮಗೆ ಗೊತ್ತಿತ್ತು. ನಮ್ಮ ಅಜ್ಜಿ ಸಾಯಲಿದ್ದಾರೆ ಎಂದು ನಮಗೆ ಗೊತ್ತಿತ್ತು. ತಾನು ಸಾಯಲಿದ್ದೇನೆ ಎಂದು ನನ್ನ ಅಜ್ಜಿ ನನಗೆ ಹೇಳಿದ್ದರು ಮತ್ತು ನನ್ನ ತಂದೆಗೆ, ‘ನೀವು ಸಾಯಲಿದ್ದೀರಿ ಎಂದೂ ಹೇಳಿದ್ದೆ’ ಎಂದು ರಾಹುಲ್‌ ತಿಳಿಸಿದರು.

1984ರಲ್ಲಿ, ಭದ್ರತಾ ಸಿಬ್ಬಂದಿಯಿಂದಲೇ ಇಂದಿರಾ ಗಾಂಧಿ ಹತ್ಯೆ ನಡೆದಿತ್ತು. ಇದೇ ಭದ್ರತಾ ಸಿಬ್ಬಂದಿ ಜೊತೆ ರಾಹುಲ್‌ ಬ್ಯಾಡ್‌ಮಿಂಟನ್‌ ಆಡುತ್ತಿದ್ದರು. 1991ರಲ್ಲಿ ರಾಹುಲ್‌ ಗಾಂಧಿ ಚೆನ್ನೈನಲ್ಲಿ ಚುನಾವಣಾ ರಾರ‍ಯಲಿಯೊಂದರಲ್ಲಿ ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್‌ ದಾಳಿಯಲ್ಲಿ ಹತರಾಗಿದ್ದರು.

ರಾಹುಲ್‌ ಗಾಂಧಿ ತಮ್ಮ ತಂದೆಯ ಹತ್ಯೆಯ ಬಗ್ಗೆ ಈ ಹಿಂದೆಯೂ ಸಾಕಷ್ಟುಬಾರಿ ಮಾತನಾಡಿದ್ದಾರೆ, ಆದರೆ ಹಂತಕರ ಬಗ್ಗೆ ಯಾವತ್ತೂ ಮಾತನಾಡಿರಲಿಲ್ಲ. 2016ರಲ್ಲಿ, ರಾಜೀವ್‌ ಗಾಂಧಿ ಹತ್ಯೆಗೆ ಸಂಬಂಧಿಸಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಏಳು ಕೈದಿಗಳ ತಮಿಳುನಾಡಿನ ಆಗಿನ ಸಿಎಂ ಜಯಲಲಿತಾ ಪ್ರಸ್ತಾಪಿಸಿದಾಗ, ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿತ್ತು. ಆದರೆ, ಅದು ಸರ್ಕಾರದ ನಿರ್ಧಾರವಾಗಿತ್ತು ಎಂದು ರಾಹುಲ್‌ ಹೇಳಿದರು. ‘ಈ ಬಗ್ಗೆ ನಾನು ನನ್ನ ವೈಯಕ್ತಿಕ ಅಭಿಪ್ರಾಯ ನೀಡುವುದಿಲ್ಲ’ ಎಂದು ತಿಳಿಸಿದರು.