ನವದೆಹಲಿ[ಮೇ.29]: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬಳಿಕ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆ ಭಾರೀ ಸದ್ದು ಮಾಡುತ್ತಿದೆ. ರಾಜೀನಾಮೆ ಸಲ್ಲಿಸಿದ್ದರೂ ಕಾರ್ಯಕಾರಿ ಸಮಿತಿ ಮಾತ್ರ ರಾಹುಲ್ ಗಾಂಧಿಯನ್ನು ಅಧ್ಯಕ್ಷರಾಗಿ ಮುಂದುವರೆಯುವಂತೆ ಸೂಚಿಸಿತ್ತು. ಹೀಗಿದ್ದರೂ ರಾಹುಲ್ ಗಾಂಧಿ ತಮ್ಮ ರಾಜೀನಾಮೆ ಹಿಂಪಡೆಯಲು ನಿರಾಕರಿಸಿದ್ದರು. ಅದರೀಗ ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ರಾಹುಲ್ ಗಾಂಧಿ ಮುದ್ದಿನ 'ಪಿಡಿ'ಯೊಂದಿಗೆ ಕಾರ್ ರೈಡಿಂಗ್ ಗೆ ಹೊರಟ ಫೋಟೋ ಒಂದು ವೈರಲ್ ಆಗಿದೆ.

ಹೌದು ಮಂಗಳವಾರದಂದು ರಾಹುಲ್ ಗಾಂಧೀ ಕಾರಿನಲ್ಲಿ ಅದೆಲ್ಲಿಗೋ ಹೊರಟಿದ್ದರು. ಈ ವೇಳೆ ಹಿಂಬದಿಯ ಸೀಟಿನಲ್ಲಿ ಅವರ ಮುದ್ದಿನ ಸಾಕು ನಾಯಿ 'ಪಿಡಿ' ಕೂಡಾ ಇತ್ತು. ಕ್ಯಾಮರಾ ಕಣ್ಣಿನಲ್ಲಿ ಈ ಫೋಟೋ ಸೆರೆಯಾಗಿದ್ದು, ಸದ್ಯ ಭಾರೀ ವೈರಲ್ ಆಗಿದೆ. ಟ್ವಿಟರಿಗರು ಈ ಫೋಟೋ ಕುರಿತಾಗಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಪಿಡಿ' ರಿಯಾಕ್ಷನ್ ಗೆ ಫುಲ್ ಫಿದಾ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ಫೋಟೋ ಬಹಳಷ್ಟು ಮಂದಿ ಇಷ್ಟ ಪಟ್ಟಿದ್ದಾರೆ. ಅದರಲ್ಲೂ ಹಿಂಬದಿ ಸೀಟಿನಲ್ಲಿ ಕುಳಿತಿದ್ದ 'ಪಿಡಿ' ರಿಯಾಕ್ಷನ್ ಬಹುತೇಕರ ಮನ ಗೆದ್ದಿದೆ. ಕೆಲವರು ಅತಿ ಸುಂದರ ಎಂದು ಕಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ರಾಹುಲ್ ಗಾಂಧಿ ಓರ್ವ ಜನ ಸಾಮಾನ್ಯರಂತಿರುತ್ತಾರೆ ಎಂದಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿ ಮುದ್ದಿನ ನಾಯಿಮರಿ ಪಿಡಿಗೆ ಬಿಸ್ಕೆಟ್ ತಿನ್ನಿಸುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಈ ವಿಡಿಯೋ ಕೂಡಾ ನೆಟ್ಟಿಗರ ಮನ ಕದ್ದಿತ್ತು,.