ಸ್ವಯಂ ಪ್ರಚಾರಕ್ಕಾಗಿ ಸಾಮಾಜಿಕ ತಾಣಗಳನ್ನು ಬಳಸಬೇಡಿ ಎಂದು ಪ್ರಧಾನಿ ನಿನ್ನೆ ಅಧಿಕಾರಿಗಳಿಗೆ ಹೇಳಿರುವುದನ್ನು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಪ್ರಧಾನಿಗೆ ಇದು ಅನ್ವಯವಾಗುವುದಿಲ್ಲ ಎಂದು ಕೊಂಕು ನುಡಿದಿದ್ದಾರೆ.

ನವದೆಹಲಿ (ಏ.22): ಸ್ವಯಂ ಪ್ರಚಾರಕ್ಕಾಗಿ ಸಾಮಾಜಿಕ ತಾಣಗಳನ್ನು ಬಳಸಬೇಡಿ ಎಂದು ಪ್ರಧಾನಿ ನಿನ್ನೆ ಅಧಿಕಾರಿಗಳಿಗೆ ಹೇಳಿರುವುದನ್ನು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಪ್ರಧಾನಿಗೆ ಇದು ಅನ್ವಯವಾಗುವುದಿಲ್ಲ ಎಂದು ಕೊಂಕು ನುಡಿದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಸಕ್ರಿಯವಾಗಿದ್ದಾರೆ. ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ದೇಶದಲ್ಲೇ ಅತೀ ಹೆಚ್ಚು ಫಾಲೋವರ್ಸನ್ನು ಹೊಂದಿದ್ದಾರೆ. ಟ್ವಿಟರ್ ಒಂದರಲ್ಲೇ 29 ಮಿಲಿಯನ್ ಫಾಲೋವರ್ಸನ್ನು ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಟೀಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸುತ್ತಾ, ಪ್ರಧಾನಿಯವರನ್ನು ಟೀಕಿಸುವ ಹಕ್ಕು ಅವರಿಗಿಲ್ಲ ಎಂದಿದ್ದಾರೆ.

Scroll to load tweet…