ದೇಶದ ಜನತೆ ನಿಮ್ಮಿಂದ ಏನನ್ನು ಕೇಳಲು ಬಯಸುತ್ತಾರೆ ಎಂದು ಗೊತ್ತಿದ್ದೂ, ಸಲಹೆಗಳನ್ನು ಯಾಕೆ ಕೇಳ್ತಿರಾ? ಫೆ.25ಕ್ಕೆ ಪ್ರಧಾನಿ ಮೋದಿ ‘ಮನ್ ಕೀ ಬಾತ್'
ಬೆಂಗಳೂರು: ಕಳೆದ ಬಾರಿಯೂ ಪ್ರಧಾನಿ ಮೋದಿ ‘ಮನ್ ಕೀ ಬಾತ್’ಗೆ ಸಲಹೆ ನೀಡಿದ್ದ ರಾಹುಲ್ ಗಾಂಧಿ ಈ ಬಾರಿಯೂ ಸಲಹೆಗಳನ್ನು ನೀಡಿದ್ದಾರೆ.
ಕಳೆದ ಬಾರಿಯೂ ನೀಡಿದ್ದ ಸಲಹೆಗಳನ್ನು ನೀವು ನಿರ್ಲಕ್ಷಿಸಿದ್ದೀರಿ. ದೇಶದ ಜನತೆ ನಿಮ್ಮಿಂದ ಏನನ್ನು ಕೇಳಲು ಬಯಸುತ್ತಾರೆ ಎಂದು ಗೊತ್ತಿದ್ದೂ, ಸಲಹೆಗಳನ್ನು ಯಾಕೆ ಕೇಳ್ತಿರಾ? ಎಂದು ಟ್ವೀಟಿಸಿರುವ ರಾಹುಲ್ ಗಾಂಧಿ, 'ನೀರವ್ ಮೋದಿಯ 22000 ಕೋಟಿ ಲೂಟಿ & ಪರಾರಿ' ಹಾಗೂ '58000 ಕೋಟಿ ರಫೇಲ್ ಹಗರಣ' ಬಗ್ಗೆ ನೀವು ಮಾತನಾಡುತ್ತೀರಿ ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಬಾರಿಯೂ ಪ್ರಧಾನಿಗೆ ಸಲಹೆ ನೀಡಿದ್ದ ರಾಹುಲ್ ಗಾಂಧಿ, ಯುವಜನರಿಗೆ ಯಾವಾಗ ಉದ್ಯೋಗ ಸಿಗುವುದು?, ಡೋಕ್ಲಾಮ್’ನಿಂದ ಚೀನಾವನ್ನು ಹಿಮ್ಮೆಟ್ಟಿಸುವುದು ಯಾವಾಗ? ಹಾಗೂ ಹರ್ಯಾಣದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಯಾವಾಗ ನಿಲ್ಲುತ್ತದೆ ಎಂಬ ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡಬೇಕೆಂದು ಕೇಳಿಕೊಂಡಿದ್ದರು.
ಫೆ.25ಕ್ಕೆ ಪ್ರಧಾನಿ ಮೋದಿ ‘ಮನ್ ಕೀ ಬಾತ್’ನಲ್ಲಿ ಮಾತನಾಡಲಿದ್ದು, ಜನರಿಂದ ಸಲಹೆಗಳನ್ನು ಕೇಳಿದ್ದಾರೆ.
