ಸಿಬಿಐ ಲುಕೌಟ್ ನೋಟಿಸನ್ನು ದುರ್ಬಲಗೊಳಿಸಿದ್ದರಿಂದ ಮಲ್ಯ ಅವರು ದೇಶ ಬಿಟ್ಟು ಓಡಿ ಹೋದರು. ಲುಕೌಟ್ ನೋಟಿಸನ್ನು ಸಿಬಿಐನಲ್ಲಿ ದುರ್ಬಲಗೊಳಿಸಿದ್ದು ಮೋದಿ ಅವರ ‘ನೀಲಿಗಣ್ಣಿನ ಹುಡುಗ’ (ನೆಚ್ಚಿನ ಮನುಷ್ಯ)’ ಎಂದು ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದಾರೆ.
ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿ ದ್ದಾರೆ. ‘ಸಿಬಿಐ ಲುಕೌಟ್ ನೋಟಿಸನ್ನು ದುರ್ಬಲಗೊಳಿಸಿದ್ದರಿಂದ ಮಲ್ಯ ಅವರು ದೇಶ ಬಿಟ್ಟು ಓಡಿ ಹೋದರು.
ಲುಕೌಟ್ ನೋಟಿಸನ್ನು ಸಿಬಿಐನಲ್ಲಿ ದುರ್ಬಲಗೊಳಿಸಿದ್ದು ಮೋದಿ ಅವರ ‘ನೀಲಿಗಣ್ಣಿನ ಹುಡುಗ’ (ನೆಚ್ಚಿನ ಮನುಷ್ಯ)’ ಎಂದು ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದಾರೆ. ಶನಿವಾರ ಟ್ವೀಟ್ ಮಾಡಿರುವ ಅವರು, ‘ಸಿಬಿಐ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಅವರು ಮಲ್ಯ ವಿರುದ್ಧದ ಲುಕೌಟ್ ನೋಟಿಸನ್ನು ದುರ್ಬಲಗೊಳಿಸಿದರು.
ಇದರಿಂದಾಗಿ ಮಲ್ಯ ಪರಾರಿಯಾದರು. ಶರ್ಮಾ ಅವರು ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯ ಗಿದ್ದು, ಸಿಬಿಐನಲ್ಲಿನ ಮೋದಿ ಅವರ ‘ನೀಲಿಗಣ್ಣಿನ ಹುಡುಗ’. ಇದೇ ಅಧಿಕಾರಿಯು ನೀರವ್ ಮೋದಿ ಹಾಗೂ ಮೇಹುಲ್ ಚೋಕ್ಸಿ ಪರಾರಿಗೂ ಸಹಕರಿಸಿದ್ದಾರೆ. ಎಂಥಾ ತನಿಖೆ...’ ಎಂದು ಕಿಡಿಕಾರಿದ್ದಾರೆ.
