ಆಗಸ್ಟ್ 4 ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ರಾಯಚೂರು ಭೇಟಿ ರದ್ದಾಗಿದೆ.
ರಾಯಚೂರು (ಜು.30): ಆಗಸ್ಟ್ 4 ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ರಾಯಚೂರು ಭೇಟಿ ರದ್ದಾಗಿದೆ.
ಆಗಸ್ಟ್ 4 ರಂದು ರಾಯಚೂರಿನಲ್ಲಿ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನ ಆಯೋಜಿಸಲಾಗಿದೆ. ಸಮಾವೇಶದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಬೇಕಿತ್ತು. ಆದರೆ ಆಗಸ್ಟ್’ನಲ್ಲಿ ರಾಜ್ಯಸಭೆ ಮತ್ತು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಇದರಲ್ಲಿ ರಾಹುಲ್ ಬ್ಯೂಸಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಮತ್ತು ಮಾಜಿ ಸಿಎಂ ಧರಮಸಿಂಗ್ ನಿಧನದಿಂದಾಗಿ ಸಮಾವೇಶವನ್ನ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಧರಂಸಿಂಗ್ ಹೈದ್ರಾಬಾದ್ ಕರ್ನಾಟಕದ ಪ್ರಶ್ನಾತೀತ ನಾಯಕರಾಗಿದ್ದರು. ಅವರಿಗೆ ಗೌರವ ನೀಡುವ ಉದ್ದೇಶದಿಂದಾಗಿ ಸಮಾವೇಶವನ್ನ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
