ಯುವಜನತೆ ಅಥವಾ ಕೈಗಾರಿಕಾ ಹಾಗೂ ಉದ್ಯಮ ವಲಯ ಸೇರಿದಂತೆ ಯಾವ ವಲಯಗಳಿಗೂ ನಿರಾಶೆ ತಂದಿದೆ.

ನವದೆಹಲಿ(ಫೆ.01): ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ವ್ಯಂಗ್ಯದ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್'ಡಿಎ ಸರ್ಕಾರದ 2018ನೇ ಸಾಲಿನ ಬಜೆಟ್ ಎಲ್ಲ ರೈತರು, ಯುವಜನತೆ ಅಥವಾ ಕೈಗಾರಿಕಾ ಹಾಗೂ ಉದ್ಯಮ ವಲಯ ಸೇರಿದಂತೆ ಯಾವ ವಲಯಗಳಿಗೂ ನಿರಾಶೆ ತಂದಿದೆ. ರೈತರಿಗೆ ಉತ್ತಮ ಬೆಲೆ ನೀಡುವುದಾಗಿ ಹೇಳಿ 4 ವರ್ಷಗಳು ಮುಗಿದಿದೆ, 4 ವರ್ಷಗಳಾದರೂ ಬಜೆಟ್'ನಲ್ಲಿ ಯಾವುದೇ ಆಕರ್ಷಿಸುವ ಯೋಜನೆಗಳಿಲ್ಲ.ಯುವಕರಿಗೆ 4 ವರ್ಷಗಳಾದರೂ ಉದ್ಯೋಗ ದೊರಕಿಲ್ಲ. ಸದ್ಯ ಇನ್ನು ಒಂದು ವರ್ಷ ಮಾತ್ರ ಉಳಿದಿದೆ'ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಜೆಟ್ ಕಣ್ಣೀರು ಒರೆಸುವುದನ್ನು ಬಿಟ್ಟರೆ ಮತ್ತೇನಿಲ್ಲ. ಸಮಾಜದ ರೈತ ಹಾಗೂ ಕೆಳ ವರ್ಗಗಳ ಸಮಾಜಕ್ಕೆ ಬಾಯಿ ಮಾತಿನ ಪಚಾರ ಸೇವೆ ಮಾಡುತ್ತಿದೆ' ಎಂದು ಪ್ರಯೋಜನಕ್ಕೆ ಬಾರದ ಆಯವ್ಯಯ ಎಂದು ಟೀಕಿಸಿದ್ದಾರೆ.