ನವದೆಹಲಿ(ಜ.30): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಫೆಲ್ ಟೀಕಾಸ್ತ್ರ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವ್ಯಂಗ್ಯಭರಿತ ಧಾಟಿಯಲ್ಲಿ ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿಯ ತಾಲ್‌ಕಟೋರಾ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್, ಸದನದಲ್ಲಿ ನಾನು ರಫೆಲ್ ಕುರಿತು ಪ್ರಶ್ನೆ ಕೇಳಿದರೆ ಪ್ರಧಾನಿ ಅತ್ತಿತ್ತ ನೋಡುತ್ತಾರೆಯೇ ಹೊರತು ಕಣ್ಣಲ್ಲಿ ಕಣ್ಣಿಟ್ಟು ಸತ್ಯ ಹೇಳುವುದಿಲ್ಲ ಎಂದು ರಾಹುಲ್ ಕುಹುಕವಾಡಿದ್ದಾರೆ.

‘ನಾನ ಸದನದಲ್ಲಿ ರಫೆಲ್ ಹಗರಣದ ಕುರಿತು ಪ್ರಸ್ತಾಪ ಮಾಡಿದ್ದೆ. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದೆ. ಆದರೆ ಇದನ್ನು ಕೇಳಿಯೂ ಕೇಳಿಸಿಕೊಳ್ಳದಂತಿದ್ದ ಮೋದಿ, ಅತ್ತಿತ್ತ ನೋಡುತ್ತ ತಪ್ಪಿಸಿಕೊಂಡರು ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.