ಭಾಷಣದಲ್ಲಿ ಬೆಂಗಳೂರಿನ ಹೂವು ಮಾರುವ ಲಕ್ಷ್ಮಿಯನ್ನು ಉಲ್ಲೇಖಿಸಿದ ರಾಹುಲ್

ಜುನಾಪುರ, ಉತ್ತರ ಪ್ರದೇಶ (ಡಿ.19)ಉತ್ತರ ಪ್ರದೇಶದ ಜುನಾಪುರದಲ್ಲಿ ಜನಾಕ್ರೋಶ ರ್ಯಾಲಿಯನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ ತನ್ನ ಭಾಷಣದಲ್ಲಿ ಬೆಂಗಳೂರಿನಲ್ಲಿ ಹೂವು ಮಾರುವ ಲಕ್ಷ್ಮಿ ಎಂಬ ಮಹಿಳೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಬೆಂಗಳೂರಿನಲ್ಲಿ ಲಕ್ಷ್ಮಿಯೆಂಬ ಹೂವು ಮಾರುವ ಮಹಿಳೆ ಬೆಳಗ್ಗೆ 4 ಗಂಟೆಗೆದ್ದು ತನ್ನ ಬಳಿಯಿರುವ ನಗದು ಹಣದಿಂದ ಹೂವು ಖರೀದಿಸುತ್ತಿದ್ದಳು, ಬಳಿಕ ಮಾರುವಾಗ ನಗದು ಪಡೆದು ಮಾರುತ್ತಿದ್ದಳು. ನೋಟು ಅಮಾನ್ಯ ಕ್ರಮದ ಬಳಿಕ ಕೆ ಭಿಕ್ಷೆ ಬೇಡುತ್ತಿದ್ದಾಳೆ. ಪ್ರಧಾನಿ ಮೋದಿಯವರೇ, ಇದಕ್ಕೆ ನೀವೇ ಕಾರಣವೆಂದು ರಾಹುಲ್ ಗಾಂಧಿ ಹೇಳಿದ್ದಾರೆ.