ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಅವಿವಾಹಿತರಾಗಿರುವ ತಮ್ಮ ಪುತ್ರ ರಾಹುಲ್ ಗಾಂಧಿ ಅವರಿಗೆ ದಲಿತ ಕನ್ಯೆಯೊಂದಿಗೆ ಮದುವೆ ಮಾಡುವ ಮೂಲಕ  ಮೇಲ್ಪಂಕ್ತಿ ಹಾಕಲಿ ಎಂದು ಮಾಜಿ ಸಚಿವರೂ ಆಗಿರುವ ಬಿಜೆಪಿ ನಾಯಕ ಗೋವಿಂದ ಕಾರಜೋಳ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ಆ.29): ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಅವಿವಾಹಿತರಾಗಿರುವ ತಮ್ಮ ಪುತ್ರ ರಾಹುಲ್ ಗಾಂಧಿ ಅವರಿಗೆ ದಲಿತ ಕನ್ಯೆಯೊಂದಿಗೆ ಮದುವೆ ಮಾಡುವ ಮೂಲಕ ಮೇಲ್ಪಂಕ್ತಿ ಹಾಕಲಿ ಎಂದು ಮಾಜಿ ಸಚಿವರೂ ಆಗಿರುವ ಬಿಜೆಪಿ ನಾಯಕ ಗೋವಿಂದ ಕಾರಜೋಳ ತೀಕ್ಷ್ಣವಾಗಿ ಹೇಳಿದ್ದಾರೆ.

ಸೋನಿಯಾಗಾಂಧಿ ಅವರು ಹಾಗೆ ಮಾಡಿದಲ್ಲಿ ಅವರಿಗೆ ತಾವು ಸಾಷ್ಟಾಂಗ ನಮಸ್ಕಾರ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ. ಯಡಿಯೂರಪ್ಪ ಅವರು ರಾಜ್ಯದ ೩೦ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ದಲಿತರ ಮನೆಗಳಿಗೆ ಹೋಗಿ ಉಟೋಪಹಾರ ಸೇವಿಸಿದ್ದರ ಬಗ್ಗೆ ಕಾಂಗ್ರೆಸ್ ಮುಖಂಡರು ಕಟುವಾಗಿ ಟೀಕೆ ಮಾಡಿದರು. ದಲಿತರ ಮನೆಗಳಿಗೆ ಊಟ ಮಾಡುವುದರ ಬದಲು ಆ ಸಮುದಾಯದ ಹೆಣ್ಣುಮಕ್ಕಳನ್ನು ತಮ್ಮ ಕುಟುಂಬಕ್ಕೆ ತೆಗೆದುಕೊಳ್ಳಬೇಕು ಎಂದರು. ಆದರೆ, ಯಡಿಯೂರಪ್ಪ ಅವರ ಎಲ್ಲ ಮಕ್ಕಳ ಮದುವೆ ಆಗಿ ಹೋಗಿದೆ ಎಂದರು.

ಹೀಗಾಗಿ, ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ಇನ್ನೂ ಅವಿವಾಹಿತರು. ನಾವು ದಲಿತ ಸಮುದಾಯದ ಕನ್ಯೆ ಕೊಡಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಮತ್ತಿತರ ರಾಜ್ಯದ ಕಾಂಗ್ರೆಸ್ ನಾಯಕರು ಮಧ್ಯಸ್ಥಿಕೆ ವಹಿಸಿ ರಾಹುಲ್ ಗಾಂಧಿ ಅವರೊಂದಿಗೆ ಮದುವೆ ಮಾಡಿಸಲಿ ಎಂದು ವ್ಯಂಗ್ಯವಾಗಿ ಹೇಳಿದರು.

ಸೋನಿಯಾಗಾಂಧಿ ಅವರು ತಮ್ಮ ಪಕ್ಷದ ಮಲ್ಲಿಕಾರ್ಜುನ ಖರ್ಗೆ ವಂಶಸ್ಥರಿಂದಲಾದರೂ ಕನ್ಯೆ ತೆಗೆದುಕೊಳ್ಳಲಿ. ನಮ್ಮ ಕಾರಜೋಳ ವಂಶಸ್ಥರಿಂದಲಾದರೂ ತೆಗೆದುಕೊಳ್ಳಲಿ. ಇಲ್ಲವೇ ಬೆಂಗಳೂರಿಗೆ ಸಮೀಪದಲ್ಲಿರುವ ಪರಮೇಶ್ವರ್ ಅವರೂ ಬೇಕಾದರೆ ತಮ್ಮ ವಂಶದ ಕನ್ಯೆ ಕೊಡಲಿ. ಇದರಿಂದ ವಿಮಾನದಲ್ಲಿ ದೆಹಲಿಯಿಂದ ಬಂದು ಹೋಗಲು ಅನುಕೂಲವಾಗುತ್ತದೆ. ಇನ್ನೊಬ್ಬರಿಗೆ ಹೇಳುವ ಬದಲು ತಾವೇ ಮಾಡಿ ತೋರಿಸಲಿ ಎಂದು ಲೇವಡಿ ಮಾಡಿದರು