ನೆಹರೂ ವಿರುದ್ಧ ವಾಗ್ದಾಳಿ: ಮೋದಿಗೆ ವಿಶಿಷ್ಟ ರೀತಿಯಲ್ಲಿ ಟಾಂಗ್ ನೀಡಿದ ರಾಹುಲ್ ಗಾಂಧಿ

First Published 11, Feb 2018, 4:12 PM IST
Rahul Gandhi Hits Back At PM Modi Over Attack on Nehru
Highlights
  • ಜವಾಹರ್ ಲಾಲ್ ನೆಹರೂ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ಗೃಹಮಂತ್ರಿ ರಾಜನಾಥ್ ಸಿಂಗ್  ಮಾಡಿರುವ ಭಾಷಣ
  • ಸತ್ಯವನ್ನು ಹೇಳಿರುವುದಕ್ಕೆ  ಧನ್ಯವಾದಗಳು ರಾಜನಾಥ್ ಸಿಂಗ್ ಅವರೇ, ಸತ್ಯಮೇವ ಜಯತೇ’ ಎಂದು ರಾಹುಲ್ ಗಾಂಧಿ ಟ್ವೀಟ್

ನವದೆಹಲಿ: ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿರುವುದಕ್ಕೆ ರಾಹುಲ್ ಗಾಂಧಿ ವಿಭಿನ್ನವಾಗಿ ತಿರುಗೇಟು ನೀಡಿದ್ದಾರೆ.

ಜವಾಹರ್ ಲಾಲ್ ನೆಹರೂ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ಗೃಹಮಂತ್ರಿ ರಾಜನಾಥ್ ಸಿಂಗ್  ಮಾಡಿರುವ ಭಾಷಣವನ್ನು ಉಲ್ಲೇಖಿಸಿ, ‘ ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಹೇಳಿರುವುದಕ್ಕೆ  ಧನ್ಯವಾದಗಳು ರಾಜನಾಥ್ ಸಿಂಗ್ ಅವರೇ, ಸತ್ಯಮೇವ ಜಯತೇ’ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ನೆಹರೂ ಜನ್ಮದಿನದ ಅಂಗವಾಗಿ ನವಂಬರ್ 14, 2015ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ರಾಜನಾಥ್ ಸಿಂಗ್, ಭಾರತಕ್ಕೆ ನೆಹರೂ ಕೊಟ್ಟಿರುವ ಕೊಡುಗೆಗಳನ್ನು ಕೊಂಡಾಡಿದ್ದಾರೆ.

ಕಳೆದ ಬುಧವಾರ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ಪ್ರಧಾನಿ ಮೋದಿ ತಮ್ಮ  ಭಾಷಣದುದ್ದಕ್ಕೂ ನೆಹರೂ ಹಾಗೂ ಕಾಂಗ್ರೆಸ್’ನ್ನು ಟೀಕಿಸಿದ್ದರು.

loader