ನವದೆಹಲಿ (ಫೆ.07): ಉತ್ತರಖಂಡದಲ್ಲಿ ನಡೆದ ಭೂಕಂಪವನ್ನು ಲಘುವಾಗಿ ಪರಿಗಣಿಸಿ ತಮಾಷೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು ಎಂದು ಉ.ಖ. ಮುಖ್ಯಮಂತ್ರಿ ಹರೀಶ್ ರಾವತ್ ಕಟುವಾಗಿ ಹೇಳಿದ್ದಾರೆ.
ನವದೆಹಲಿ (ಫೆ.07): ಉತ್ತರಖಂಡದಲ್ಲಿ ನಡೆದ ಭೂಕಂಪವನ್ನು ಲಘುವಾಗಿ ಪರಿಗಣಿಸಿ ತಮಾಷೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು ಎಂದು ಉ.ಖ. ಮುಖ್ಯಮಂತ್ರಿ ಹರೀಶ್ ರಾವತ್ ಕಟುವಾಗಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಭಾಷಣ ಮಾಡುತ್ತಾ, ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ‘ಭೂಕಂಪದ’ ಬಗ್ಗೆ ಮಾಡಿರುವ ಟೀಕೆಗೆ ಪ್ರತ್ಯುತ್ತರ ನೀಡುತ್ತಾ, ಕೊನೆಗೂ ದೇಶಕ್ಕೆ ಸೋಮವಾರ ಭೂ ನಡುಕದ ಅನುಭವವಾಯಿತು ಎಂದಿದ್ದಾರೆ.
ಭೂಕಂಪ ಯಾಕೆ ಸಂಭವಿಸಿತು ಎಂದು ನನಗೆ ಆಶ್ಚರ್ಯವಾಗುತ್ತಿದೆ. SCAM ನಲ್ಲಿ ಏನಾದರೂ ಒಳ್ಳೆಯದಿದ್ದರೆ ಭೂತಾಯಿ ಖಂಡಿತವಾಗಿಯೂ ನಲುಗುತ್ತಾಳೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಹೇಳಿಕೆಯನ್ನು ಖಂಡಿಸುತ್ತಾ ರಾಹುಲ್ ಗಾಂಧಿ, ಉತ್ತರಖಂಡದಲ್ಲಿ ನಡೆದ ಭೂಕಂಪವನ್ನು ತಮಾಷೆ ಮಾಡುವ ಮೂಲಕ ಜನರ ಭಾವನೆಗಳಿಗೆ ಅವಮಾನ ಮಾಡಿದ್ದಾರೆ. ಮತ್ತು ವಿರೋಧ ಪಕ್ಷದ ಯಾವ ಪ್ರಶ್ನೆಗಳಿಗೂ ಉತ್ತರ ನೀಡಿಲ್ಲವೆಂದು ಹೇಳಿದ್ದಾರೆ.