ಈ ಮಹಿಳೆಗೆ  ಡಿ.25ಕ್ಕೆ 107 ವರ್ಷಗಳು ತುಂಬಿದ್ದು, ಕ್ರಿಸ್ಮಸ್ ದಿನವೇ ಆಕೆಯ ಜನ್ಮದಿನವನ್ನು ಆಚರಣೆ ಮಾಡಲಾಗಿದೆ.

ನವದೆಹಲಿ (ಡಿ.26): ಈ ಮಹಿಳೆಗೆ ಡಿ.25ಕ್ಕೆ 107 ವರ್ಷಗಳು ತುಂಬಿದ್ದು, ಕ್ರಿಸ್ಮಸ್ ದಿನವೇ ಆಕೆಯ ಜನ್ಮದಿನವನ್ನು ಆಚರಣೆ ಮಾಡಲಾಗಿದೆ.

ಈ ವೇಳೆ ಆಕೆ ಬಯಸಿದ ಉಡುಗೊರೆಯೊಂದು ದೊರಕಿದೆ. ಅದೇನು ಗೊತ್ತಾ ಕಾಂಗ್ರೆಸ್ ನೂತನ ಅಧ್ಯಕ್ಷರಾದ ರಾಹುಲ್ ಗಾಂಧಿ ತಾವೇ ಸ್ವತಃ ಕರೆ ಮಾಡಿ ಆಕೆಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಮಹಿಳೆಯು ಅನೇಕ ದಿನಗಳಿಂದಲೂ ಕೂಡ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಬಯಕೆಯನ್ನು ಹೊಂದಿದ್ದರು.

Scroll to load tweet…

ಇದರಿಂದ ಮೊಮ್ಮಗಳಾದ ಬೆಂಗಳೂರು ನಿವಾಸಿ ದೀಪಾಲಿ ಸಿಕಂದ್ ಟ್ವೀಟ್ ಮಾಡಿ ತನ್ನ ಅಜ್ಜಿಯ ಆಸೆಯ ಬಗ್ಗೆ ತಿಳಿಸಿದ್ದರು.

Scroll to load tweet…

ಇದನ್ನು ನೋಡಿದ ರಾಹುಲ್ ಕರೆ ಮಾಡಿದ್ದಲ್ಲದೇ, ಪ್ರತಿಯಾಗಿ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

Scroll to load tweet…