ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿನ ತಿಂಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೋಯ್ಲಿ ಹೇಳಿದ್ದಾರೆ.

ನವದೆಹಲಿ (ಸೆ.15): ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿನ ತಿಂಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೋಯ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಜಬಾಬ್ದಾರಿಯನ್ನು ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ಹಿರಿಯ ಮುಖಂಡರು ಕೇಳಿಕೊಂಡಾಗ ಅದಕ್ಕೆ ರಾಹುಲ್ ಗಾಂಧಿ ಸಿದ್ದವಾಗಿದ್ದರು. ಅದಕ್ಕೀಗ ಸಮಯ ಸನ್ನಿಹಿತವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ಈ ಕೂಡಲೇ ವಹಿಸಿಕೊಳ್ಳಬೇಕು. ಪಕ್ಷ ಹಾಗೂ ದೇಶದ ದೃಷ್ಟಿಯಿಂದ ಇದು ಒಳ್ಳೆಯದು ಎಂದು ವೀರಪ್ಪ ಮೋಯ್ಲಿ ಹೇಳಿದ್ದಾರೆ.

ಈಗಾಗಲೇ ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕಿತ್ತು. ಕಾರಣಾಂತರದಿಂದ ತಡವಾಗಿದೆ. ಚುನಾವಣೆಗಾಗಿ ಕಾಯುತ್ತಿದ್ದೇವೆ. ಮುಂದಿನ ತಿಂಗಳು ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಪಕ್ಷವನ್ನು ತ್ವರಿತವಾಗಿ ಇನ್ನಷ್ಟು ಬೂಸ್ಟ್ ಮಾಡುವ ಅಗತ್ಯವಿದೆ. ರಾಹುಲ್ ಗಾಂಧಿ ಅದನ್ನು ಮಾಡುತ್ತಿದ್ದಾರೆ. 2019 ರ ಲೋಕಸಭಾ ಚುನಾವಣೆಗೆ ಹೊಸ ವಿಧಾನದಲ್ಲಿ ಸ್ಟ್ರಾಟೆಜಿ ಮಾಡಲಿಸದ್ದೇವೆ ಎಂದು ಮೋಯ್ಲಿ ಹೇಳಿದ್ದಾರೆ.