ಜಾರ್ಖಂಡ್‌, ಯುಪಿಯಲ್ಲೂ ಸ್ಥಾನಕ್ಕೆ ಎಲ್‌ಜೆಪಿ ಪಟ್ಟು ಹಿಡಿದಿದ್ದಲ್ಲದೆ, ರಾಹುಲ್ ಗಾಂಧಿಯನ್ನು ಬಾಯ್ತುಂಬಾ ಹೊಗಳಿದ್ದಾರೆ. ಇದು ಬಿಜೆಪಿಗೆ ತಲೆನೋವು ನೀಡಿದೆ.

ಪಟನಾ[ಡಿ.20]: ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಲೋಕಜನಾಶಕ್ತಿ ಮುಖಂಡ ಚಿರಾಗ್‌ ಪಾಸ್ವಾನ್‌ ಸೀಟು ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಷ್ಟೇ ಅಲ್ಲದೆ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿಯೂ ತನಗೆ ಬಿಜೆಪಿ ಸೀಟು ಬಿಟ್ಟುಕೊಡಬೇಕು.

ಸಮಯ ಮೀರುತ್ತಿದೆ ಎಂದು ಎಲ್‌ಜೆಪಿ ಆಗ್ರಹಿಸಿದೆ. ಈ ಕುರಿತು ನಿರ್ಧಾರ ಕೈಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಡಿಸೆಂಬರ್‌ 31ರ ಗಡುವನ್ನು ಎಲ್‌ಜೆಪಿ ನೀಡಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಈ ಬಗ್ಗೆ ಬುಧವಾರ ಮಾತನಾಡಿದ ಎಲ್‌ಜೆಪಿ ಮುಖಂಡ ಪಶುಪತಿ ಕುಮಾರ್‌ ಪಾರಸ್‌ ಅವರು, ‘ಮತ ಬ್ಯಾಂಕ್‌ ಹೊಂದಿರುವ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿಯೂ ಸೀಟು ಬಿಟ್ಟು ಕೊಡುವ ಮೂಲಕ ಬಿಜೆಪಿ ಮೈತ್ರಿಯ ಪಾವಿತ್ರ್ಯತೆ ಕಾಪಾಡಬೇಕು,’ ಎಂದು ಹೇಳಿದರು.