ಉತ್ತರ ಪ್ರದೇಶದ ಶಹರಾನ್ಪುರದಲ್ಲಿ ಜಾತಿ ಸಂಘರ್ಷ ನಡೆದ ಕಾರಣ ರಾಹುಲ್ ಗಾಂಧಿ ಭೇಟಿಗೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ನಾಳೆ ಶಹರಾನ್ಪುರಕ್ಕೆ ಭೇಟಿ ನೀಡುವವರಿದ್ದರು. ಆದರೆ ಅವರಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.  

ನವದೆಹಲಿ (ಮೇ.26): ಉತ್ತರ ಪ್ರದೇಶದ ಶಹರಾನ್ಪುರದಲ್ಲಿ ಜಾತಿ ಸಂಘರ್ಷ ನಡೆದ ಕಾರಣ ರಾಹುಲ್ ಗಾಂಧಿ ಭೇಟಿಗೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ನಾಳೆ ಶಹರಾನ್ಪುರಕ್ಕೆ ಭೇಟಿ ನೀಡುವವರಿದ್ದರು. ಆದರೆ ಅವರಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

40 ದಿನಗಳ ಹಿಂದೆ ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಮೆರವಣಿಗೆಯಲ್ಲಿ ರಾಜಪೂತ್ ಹಾಗೂ ದಲಿತರ ನಡುವೆ ಜಗಳ ಉಂಟಾಗಿತ್ತು. ಈ ಗಲಾಟೆಯಲ್ಲಿ ಇಬ್ಬರು ಮೃತಪಟ್ಟಿದ್ದು ಕೆಲವರು ಗಾಯಗೊಂಡಿದ್ದರು. ಕಳೆದ ಮಂಗಳವಾರ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಶಹರಾನ್ಪುರಕ್ಕೆ ಭೇಟಿ ನೀಡಿದ ಬಳಿಕ ಗಲಾಟೆ ಮತ್ತೆ ಭುಗಿಲೆಬ್ಬಿತ್ತು. ಇದರಲ್ಲಿ ಒಬ್ಬ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜಕಾರಣಿಗಳ ಭೇಟಿಯನ್ನು ನಿರಾಕರಿಸಲಾಗಿದೆ. ಹಾಗಾಗಿ ನಾಳೆ ಭೇಟಿ ನೀಡಲಿದ್ದ ರಾಹುಲ್ ಗಾಂಧಿಗೆ ಅನುಮತಿ ನಿರಾಕರಿಸಲಾಗಿದೆ.