ಸೋಲಿನ ಸುಳಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಹೊಸ ನಾಯಕತ್ವವನ್ನು ನೀಡಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ದೀಪಾವಳಿ ನಂತರ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನಕ್ಕಾಗಿ ಔಪಚಾರಿಕ ಚುನಾವಣೆಗಳು ನಡೆಯಲಿದ್ದು ರಾಹುಲ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಳಿದ್ದು ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆಯಾಗಿ ಮುಂದುವರೆಯಲಿದ್ದಾರೆ.
ನವದೆಹಲಿ (ಅ.04): ಸೋಲಿನ ಸುಳಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಹೊಸ ನಾಯಕತ್ವವನ್ನು ನೀಡಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ದೀಪಾವಳಿ ನಂತರ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನಕ್ಕಾಗಿ ಔಪಚಾರಿಕ ಚುನಾವಣೆಗಳು ನಡೆಯಲಿದ್ದು ರಾಹುಲ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಳಿದ್ದು ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆಯಾಗಿ ಮುಂದುವರೆಯಲಿದ್ದಾರೆ. ಕಳೆದ 3 ವರ್ಷಗಳಿಂದ ಪಕ್ಷದ ದೈನಂದಿನ ಕಾರುಬಾರು ರಾಹುಲ್ ಗಾಂಧಿಯೇ ಸಂಭಾಳಿಸುತ್ತಿದ್ದು ಆ ಮಟ್ಟಿಗೆ ಅಧ್ಯಕ್ಷ ಸ್ಥಾನ ಒಂದು ಪಕ್ಕ ಔಪಚರಿಕತೆ ಅಷ್ಟೇ.
ಕಾಂಗ್ರೆಸ್ ಸ್ಥಿತಿ ಗತಿ ಬದಲಿಸಬಲ್ಲರಾ ರಾಹುಲ್ ?
ಸೋಲಿನ ಮೇಲೆ ಸೋಲನ್ನು ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ರಾಹುಲ್ ಮೇಲೆ ಎತ್ತಬಲ್ಲರೆ ಅನ್ನುವುದೇ ಇರುವ ದೊಡ್ಡ ಪ್ರಶ್ನೆಯಾಗಿದೆ. ರಾಹುಲ್’ಗೆ ಉತ್ತರ ಪ್ರದೇಶದಿಂದ ಹಿಡಿದು ಅಸ್ಸಾಂ ವರೆಗೆ ಬಹು ಬೇಗ ಸೋಲನ್ನು ಒಪ್ಪಿಕೊಳ್ಳುವ ನಾಯಕ ಎಂಬ ಹಣೆ ಪಟ್ಟಿಯಿದೆ. 2014 ರಲ್ಲಿ ಮೋದಿ ವರ್ಸಸ್ ರಾಹುಲ್ ಎಂಬ ರೀತಿಯಲ್ಲಿ ಚುನಾವಣಾ ಕಣ ಏರ್ಪಟ್ಟಾಗ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ 44 ಸ್ಥಾನ ಪಡೆದಿತ್ತು. ಕಾಂಗ್ರೆಸ್ ನ ರಾಜ್ಯಗಳ ಪ್ರಬಲ ನಾಯಕರನ್ನು ಮೋದಿ ಮತ್ತು ಅಮಿತ್ ಷಾ ಜಾಣತನ ದಿಂದ ಸೆಳೆಯುತ್ತಿದ್ದಾರೆ. ರಾಹುಲ್ ರನ್ನು ಸದ್ಯದ ಸ್ಥಿತಿಯಲ್ಲಂತೂ ದೇಶದ ಯುವ ಮತದಾರ ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಆರ್ಥಿಕ ಕುಸಿತದಿಂದ ಸ್ವಲ್ಪ ಬ್ಯಾಕ್ ಫುಟ್ ನಲ್ಲಿರುವ ಮೋದಿ ಸರ್ಕಾರಕ್ಕೆ ರಾಹುಲ್ ಪರಿಶ್ರಮ ಪಟ್ಟರೆ ಸ್ವಲ್ಪ ಬೆವರಿಳಿಸಬಹುದು.ಆದರೆ ರಾಹುಲ್ ಪಕ್ಷದಲ್ಲಿರುವ ಸೀನಿಯರ್ ಮತ್ತು ಜ್ಯುನಿಯರ್ ನಾಯಕರನ್ನು ಒಟ್ಟಾಗಿ ತೆಗೆದು ಕೊಂಡು ಹೋದರೆ ಮಾತ್ರ ಇದು ಸಾಧ್ಯವಿದೆ. ಒಟ್ಟಾರೆ ಮೋತಿಲಾಲ್ ನೆಹರು ಪಂಡಿತ್ ಜವಾಹರ ಲಾಲ್ ನೆಹರು ಇಂದಿರಾ ಗಾಂಧಿ ಸೋನಿಯಾ ಗಾಂಧಿ ನಂತರ ಗಾಂಧಿ ಕುಟುಂಬದ 5 ನೇ ತಲೆಮಾರು ಕಾಂಗ್ರೆಸ್ ಅಧ್ಯಕ್ಷ ಗಿರಿ ಸಂಭಾಳಿಸಲಿದ್ದು ಕಷ್ಟದ ದಿನಗಳಿಂದ ಪಕ್ಷವನ್ನು ಆಚೆಗೆ ತರಬಲ್ಲರೆ ಎನ್ನುವುದು ಭವಿಷ್ಯದ ಕುತೂಹಲ.
