ನಿರೀಕ್ಷೆಯಂತೆ ಎಐಎಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಅಧಿಪತ್ಯ ವಹಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದೆ.

ನವದೆಹಲಿ (ಡಿ.11: ನಿರೀಕ್ಷೆಯಂತೆ ಎಐಎಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಅಧಿಪತ್ಯ ವಹಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಇದೇ ಡಿಸೆಂಬರ್ 16 ರಂದು ಪಟ್ಟಾಭಿಷೇಕ ನಡೆಯೋದು ಖಚಿತವಾಗಿದೆ. ಆ ಮೂಲಕ ಕಳೆದೆರಡು ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಆಳಿದ್ದ ಸೋನಿಯಾಗಾಂಧಿ ಅವರ ಯುಗಾಂತ್ಯ ಸನಿಹವಾಗಿದ್ದು, 47 ವರ್ಷದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧಿಪತ್ಯವಹಿಸಲಿದ್ದಾರೆ. ಮೂಲಗಳ ಪ್ರಕಾರ ಇಂದೇ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಯಾಕಂದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಅಂತಿಮ ದಿನವಾಗಿದೆ. ಈವರೆಗೂ ರಾಹುಲ್ ಗಾಂಧಿ ಹೊರತುಪಡಿಸಿದರೆ ಯಾವ ನಾಯಕರೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರೇ ಅವಿರೋಧವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ರಾಹುಲ್‌ ಅವರು ನೆರಹರೂ-ಗಾಂಧಿ ಕುಟುಂಬದಲ್ಲಿ ಈ ಹುದ್ದೆಯನ್ನು ಅಲಂಕರಿಸಲಿರುವ 6ನೇ ನಾಯಕರಾಗಲಿದ್ದಾರೆ. ಇನ್ನು ಡಿಸೆಂಬರ್​​ 18ರಂದು ಗುಜರಾತ್​ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅದಕ್ಕೂ ಎರಡು ದಿನ ಮುನ್ನ ರಾಹುಲ್​ ಪಟ್ಟಾಭಿಷೇಕ ನಡೆಯಲಿದೆ.