ಈ ಹುಡುಗ ದೊಡ್ಡವನೇ ಆಗುತ್ತಿಲ್ಲ. ಈತ ಇನ್ನೂ ಡೈಪರ್‌ನಿಂದ ಹೊರಗಡೆಯೇ ಬಂದಿಲ್ಲ. ಹೀಗೆಂದು ಕಾಂಗ್ರೆಸ್​​ ಯುವರಾಜ ರಾಹುಲ್ ಗಾಂಧಿ ವಿರುದ್ಧ ಲೇವಡಿ ಮಾಡಿದ್ದಾರೆ ಉತ್ತರ ಪ್ರದೇಶ ಆರೋಗ್ಯ ಸಚಿವ ಸಿದ್ಧಾರ್ಥನಾಥ್​.

ಉತ್ತರಪ್ರದೇಶ(ಅ.10): ಈ ಹುಡುಗ ದೊಡ್ಡವನೇ ಆಗುತ್ತಿಲ್ಲ. ಈತ ಇನ್ನೂ ಡೈಪರ್‌ನಿಂದ ಹೊರಗಡೆಯೇ ಬಂದಿಲ್ಲ. ಹೀಗೆಂದು ಕಾಂಗ್ರೆಸ್​​ ಯುವರಾಜ ರಾಹುಲ್ ಗಾಂಧಿ ವಿರುದ್ಧ ಲೇವಡಿ ಮಾಡಿದ್ದಾರೆ ಉತ್ತರ ಪ್ರದೇಶ ಆರೋಗ್ಯ ಸಚಿವ ಸಿದ್ಧಾರ್ಥನಾಥ್​.

Add Asianetnews Kannada as a Preferred SourcegooglePreferred

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಅವರ ಪುತ್ರ ಜಯ್ ಶಾ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ನ್ನು ವೆಬ್ ಪೋರ್ಟಲ್ ವಾಹಿನಿಯ ವರದಿ ಮಾಡಿತ್ತು. ಅದನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ದಾರ್ಥನಾಥ್ ರಾಹೂಲ್ ಗಾಂಧಿಯನ್ನು ವ್ಯಂಗ್ಯವಾಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರನ್ನು ದಾರಿತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಸಿದ್ದಾರ್ಥನಾಥ್, ಟ್ವೀಟಿಗೆ ಪ್ರತಿಕ್ರಿಯೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು 5 ಸಾವಿರ ಕೋಟಿ ರೂಪಾಯಿಯ ಹೆರಾಲ್ಡ್ ಹಗರಣಕ್ಕೆ ಗುರಿ ಮಾಡುವ ಧಾಟಿಯಲ್ಲಿ ಸಚಿವರು ಮಾತನಾಡಿದ್ದಾರೆ. ಜಯ್ ಶಾ ಪರ ವಕಾಲತ್ತು ವಹಿಸಲು ನೀವೇಕೆ ಲಖನೌದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ಕೇಳಿದಾಗ, ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಮತ್ತು ಯುಪಿಸಿಸಿ ಮುಖ್ಯಸ್ಥ ರಾಜ್ ಬಬ್ಬರ್ ಕೂಡಾ ಲಖನೌದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿಲ್ಲವೇ ಎಂದು ಪ್ರಶ್ನಿಸಿದರು.