ಕಳೆದ ತಿಂಗಳು ನಾರ್ವೆ ಹಾಗೂ ಈಗ ಅಮೆರಿಕ ಪ್ರವಾಸವನ್ನು ರಾಹುಲ್ ಕೈಗೊಂಡಿರುವುದರ ಹಿಂದಿನ ನೈಜ ಉದ್ದೇಶಗಳಲ್ಲಿ ಇಮೇಜ್ ವೃದ್ಧಿ ಕಸರತ್ತು ಮತ್ತು ಪಕ್ಷದ ಬೊಕ್ಕಸ ತುಂಬವ ಕಸರತ್ತು ಅಡಗಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ.

ನವದೆಹಲಿ: ಕಳೆದ ತಿಂಗಳು ನಾರ್ವೆ ಹಾಗೂ ಈಗ ಅಮೆರಿಕ ಪ್ರವಾಸವನ್ನು ರಾಹುಲ್ ಕೈಗೊಂಡಿರುವುದರ ಹಿಂದಿನ ನೈಜ ಉದ್ದೇಶಗಳಲ್ಲಿ ಇಮೇಜ್ ವೃದ್ಧಿ ಕಸರತ್ತು ಮತ್ತು ಪಕ್ಷದ ಬೊಕ್ಕಸ ತುಂಬವ ಕಸರತ್ತು ಅಡಗಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ.

ದೇಶದಲ್ಲೇ ಕಾಂಗ್ರೆಸ್ಸಿನ ಸ್ಥಿತಿ ದಯನೀಯವಾಗಿರುವಾಗ, ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗ ರಾಹುಲ್ ಏಕೆ ಈ ಪ್ರಯೋಗ ಮಾಡಲು ಹೊರಟಿದ್ದಾರೆ ಎಂಬ ಪ್ರಶ್ನೆ ಏಳುವುದು ಸಹಜ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಕಾರ್ಪೋರೆಟ್ ಕುಳಗಳು ಆ ಪಕ್ಷಕ್ಕೆ ದೇಣಿಗೆ ನೀಡುವುದು ವ್ಯರ್ಥ ಎಂಬ ನಿಲುವು ಹೊಂದಿವೆ.

ಸಂಪನ್ಮೂಲ ಒದಗಿಸುತ್ತಿದ್ದ ಕರ್ನಾಟಕದಂತಹ ರಾಜ್ಯಗಳು ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿವೆ. ಹೀಗಾಗಿ ತಾವು ಮೋದಿ ಅವರಿಗೆ ಸರಿಸಮನಾದ ನಾಯಕ ಎಂಬ ಇಮೇಜ್ ಬೆಳೆಸಿಕೊಂಡು, ಪಕ್ಷಕ್ಕೆ ಸಂಪನ್ಮೂಲದ ದಾರಿ ತೋರಿಸಲು ರಾಹುಲ್ ಅವರು ವಿದೇಶ ಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.