ಹೈದರಾಬಾದ್‌[ಸೆ.09]: ಚಿಂದಿ ಆಯುವಾಗ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ದಾರುಣ ಘಟನೆ ಹೈದರಾಬಾದ್‌ ಸಂಶಾಬಾದ್‌ ವಿಮಾನ ನಿಲ್ದಾಣದ ಸಮೀಪ ಭಾನುವಾರ ನಡೆದಿದೆ.

ಚಿಂದಿ ಆಯುತ್ತಿದ್ದ ಅಲಿ(40) ಎಂಬಾತನಿಗೆ ದಿನನಿತ್ಯದಂತೆ ವಿವಿಧ ಕಡೆಗಳಲ್ಲಿ ಗಜರಿ ಸಂಗ್ರಹಿಸುತ್ತಿದ್ದ ವೇಳೆ ಬ್ಯಾಗ್‌ವೊಂದು ಸಿಕ್ಕಿದೆ. ಅದರಲ್ಲೇನಿದೆ ಎಂದು ಕುತೂಹಲದಿಂದ ತೆರೆದು ನೋಡಿದಾಗ, ಅದರಲ್ಲಿದ್ದ ರಾಸಾಯನಿಕ ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ವ್ಯಕ್ತಿಯ ಕೈ ಗಂಭೀರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಿ ವಿಜ್ಞಾನ ತಜ್ಞರು ಹಾಗೂ ಶ್ವಾನ ದಳ ಸ್ಥಳಕ್ಕಾಗಮಿಸಿದ್ದು ಸ್ಥಳ ಪರೀಶಿಲನೆ ನಡೆಸಿ ವರದಿ ನೀಡಲಿದ್ದಾರೆ ಎಂದು ಸಂಶಾಬಾದ್‌ ಪೊಲೀಸ್‌ ಆಯುಕ್ತ ಪ್ರಕಾಶ್‌ ರೆಡ್ಡಿ ತಿಳಿಸಿದ್ದಾರೆ. ಅಲ್ಲದೇ ಬಾಂಬ್‌ ವದಂತಿಯನ್ನು ತಳ್ಳಿ ಹಾಕಿದ್ದಾರೆ.