ಆರ್‌ಬಿಐ ಮಾಜಿ ಗವರ್ನರ್‌ ರಾಜನ್‌ಗೂ ವಿಎಚ್‌ಪಿ ಆಹ್ವಾನ

Raghuram Rajan invited to World Hindu Congress in Chicago by VHP
Highlights

ಪ್ರಣಬ್‌ ಮುಖರ್ಜಿ ಅವರನ್ನು ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ವಿಶ್ವ ಹಿಂದೂ ಪರಿಷತ್‌ ಮತ್ತು ಸಂಘ ಪರಿವಾರ ಸೇರಿದ ಹಿಂದೂ ಸಂಘಟನೆಗಳು, 'ವಿಶ್ವ ಹಿಂದೂ ಕಾಂಗ್ರೆಸ್‌' ಕಾರ್ಯಕ್ರಮಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರನ್ನೂ ಮತ್ತೊಂದು ಕಾರ್ಯಕ್ರಮಕ್ಕೆ ಆಹ್ವಾನಿಸಿವೆ. 

ವಾಷಿಂಗ್ಟನ್‌: ಪ್ರಣಬ್‌ ಮುಖರ್ಜಿ ಅವರನ್ನು ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ವಿಶ್ವ ಹಿಂದೂ ಪರಿಷತ್‌ ಮತ್ತು ಸಂಘ ಪರಿವಾರ ಸೇರಿದ ಹಿಂದೂ ಸಂಘಟನೆಗಳು, 'ವಿಶ್ವ ಹಿಂದೂ ಕಾಂಗ್ರೆಸ್‌' ಕಾರ್ಯಕ್ರಮಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರನ್ನೂ ಮತ್ತೊಂದು ಕಾರ್ಯಕ್ರಮಕ್ಕೆ ಆಹ್ವಾನಿಸಿವೆ. 

ಸ್ವಾಮಿ ವಿವೇಕಾನಂದ ಅವರು ವಿಶ್ವ ಧಾರ್ಮಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಐತಿಹಾಸಿಕ ಘಟನೆಗೆ ಸೆಪ್ಟೆಂಬರ್‌ 11ಕ್ಕೆ 125 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಸೆ.7ರಿಂದ ಸೆ.9ರವರೆಗೂ ವಿಶ್ವ ಹಿಂದೂ ಕಾಂಗ್ರೆಸ್‌ ಕಾರ್ಯಕ್ರಮವನ್ನು ಅಮೆರಿಕದ ಷಿಕಾಗೋದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರನ್ನು ಆಹ್ವಾನಿಸಲಾಗಿದೆ. 

ಈ ಬಗ್ಗೆ ಗುರುವಾರ ಮಾತನಾಡಿದ ಹೆಸರು ಹೇಳಿಕೊಳ್ಳಲು ಇಚ್ಛಿಸದ ಸಂಘಟನೆ ಮುಖಂಡರೊಬ್ಬರು, 'ನಮ್ಮ ಆಹ್ವಾನವನ್ನು ರಾಜನ್‌ ಅವರು ಒಪ್ಪಿದ್ದು, ಕಾರ್ಯಕ್ರಮಕ್ಕೆ ಆಗಮಿಸಲು ಯತ್ನಿಸುತ್ತೇನೆ ಎಂದಿದ್ದಾರೆ. ಹಾಗಾಗಿ, ಅವರು ಬರುತ್ತಾರೆ ಎಂಬ ನಿರೀಕ್ಷೆ ನಮಗಿದೆ,' ಎಂದಿದ್ದಾರೆ.

ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಪ್ರಣಬ್‌ಗೆ ಆಹ್ವಾನ
 

loader