Asianet Suvarna News Asianet Suvarna News

ಅಜ್ಜನ ಸಮಾಧಿಯಲ್ಲೇ ಉದಯ್ ಅಂತ್ಯಸಂಸ್ಕಾರ

ಉದಯ್'ನ ತಾತನ ಸಮಾಧಿಯನ್ನು ಅಗೆದು ಅದೇ ಸ್ಥಳದಲ್ಲಿ ಉದಯ್ ಶವ ಹೂಳಲಾಯಿತು.

raghav uday last rites
  • Facebook
  • Twitter
  • Whatsapp

ಬೆಂಗಳೂರು(ನ. 10): ಮಾಸ್ತಿಗುಡಿ ಶೂಟಿಂಗ್ ವೇಳೆ ದುರಂತ ಸಾವಿಗೀಡಾಗಿದ್ದ ರಾಘವ್ ಉದಯ್ ಇಂದು ಪಂಚಭೂತಗಳಲ್ಲಿ ಲೀನರಾದರು. ಬನಶಂಕರಿ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಉದಯ್'ನ ಅಂತ್ಯಸಂಸ್ಕಾರ ನಡೆಯಿತು. ಉದಯ್'ನ ತಾತನ ಸಮಾಧಿಯನ್ನು ಅಗೆದು ಅದೇ ಸ್ಥಳದಲ್ಲಿ ಉದಯ್ ಶವ ಹೂಳಲಾಯಿತು.

ಇದಕ್ಕೂ ಮುನ್ನ, ಬನಶಂಕರಿ ಬಳಿಯ ಯಡಿಯೂರಿನಲ್ಲಿರುವ ಉದಯ್ ನಿವಾಸದಲ್ಲಿ ಸಾವಿರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ಪುನೀತ್ ರಾಜಕುಮಾರ್, ಭಾರತಿ ವಿಷ್ಣುವರ್ಧನ್, ಶಿವರಾಂ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರೂ ಅಂತಿಮ ದರ್ಶನ ಪಡೆದರು. ಆರ್.ಅಶೋಕ್, ಸರವಣ ಮೊದಲಾದ ರಾಜಕೀಯ ಮುಖಂಡರೂ ಸ್ಥಳಕ್ಕೆ ಆಗಮಿಸಿ ಉದಯ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

Follow Us:
Download App:
  • android
  • ios